ಸುಳ್ಯ, ಮೇ : ಕರ್ನಾಟಕ ಸರಕಾರದಲ್ಲಿ ಈಗ ಕಾಂಗ್ರೆಸ್ ಆಡಳಿತವಿದ್ದು ಸಿದ್ದರಾಮಯ್ಯರಿಂದ ಜನರು ನೊಂದಿದ್ದಾರೆ. ಯೋಗಿ ಅದಿತ್ಯನಾಥ್ ಮತ್ತು ನರೇಂದ್ರ ಮೋದಿಯವರ ಅಬ್ಬರದ ಚುನಾವಣೆ ಪ್ರಚಾರದ ಹಿನ್ನಲೆಯಲ್ಲಿ ಕರ್ನಾಟದಲ್ಲಿ ಬಿ.ಜೆ.ಪಿ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ.ಮೇ.16 ಕ್ಕೆ ಕಾಂಗ್ರೆಸ್ ಸರಕಾರ ಅಧಿಕಾರದಿಂದ ಕೆಳಗಿಳಲಿಯಲಿದೆ ಎಂದು ಕೇರಳ ರಾಜ್ಯದ ಬಿ.ಜೆ.ಪಿ ಪ್ರಧಾನ ಕಾರ್ಯದರ್ಶಿ ಸುರೇಂದ್ರನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಅವರು ಸುಳ್ಯದ ಚೆನ್ನಕೇಶವ ದೇವಾಲಯದ ಬಳಿ ಬಿ.ಜೆ.ಪಿ ವತಿಯಿಂದ ನಡೆದ ಸಮಾವೇಶದಲ್ಲಿ ಮಾತನಾಡಿದರು. ವಿಧಾನಸಭಾ ಚುನಾವಣೆಯ ಮತ ಎಣಿಕೆಯ ಮೇ.15 ರ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾಂಗ್ರೆಸ್ ತಂಡ ಅರಬ್ಬಿಸಮುದ್ರ ಸೇರಲಿದೆ. ಚುನಾವಣಾ ಆರಂಭದಲ್ಲಿ ಉತ್ಸಹದಿಂದ ಬೀಗುತ್ತಿದ್ದ ಕಾಂಗ್ರೆಸ್ ಈಗ ಸಮ್ಮಿಶ್ರ ಸರಕಾರದ ಕನಸು ಕಾಣುತ್ತಿದೆ. ಭಾರಿ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಚುನಾವಣೆಯ ಬಳಿಕ ರಾಹುಲ್ ಗಾಂಧಿ ಕಾಶಿಗೆ ಹೋಗಲು ಮಾತ್ರ ಸಾಧ್ಯ ಇದೆ ಎಂದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಎ.ವಿ.ತೀರ್ಥರಾಮ, ಅಭ್ಯರ್ಥಿ ಎಸ್.ಅಂಗಾರ, ಬಿಜೆಪಿ ಚುನಾವಣಾ ಉಸ್ತುವಾರಿ ಎ.ವಿ.ತೀರ್ಥರಾಮ ಮಾತನಾಡಿದರು. ಬಿಜೆಪಿ ಸುಳ್ಯ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಸ್ವಾಗತಿಸಿ, ಪ್ರಧಾನ ಕಾರ್ಯದರ್ಶಿ ಸುಬೋಧ್ ಶೆಟ್ಟಿ ಮೇನಾಲ ವಂದಿಸಿದರು. ರಾಕೇಶ್ ರೈ ಕೆಡೆಂಜಿ ಮತ್ತು ವಿನಯಕುಮಾರ್ ಕಂದಡ್ಕ ಕಾರ್ಯಕ್ರಮ ನಿರೂಪಿಸಿದರು. ಸುಜನ್ ವಂದೇ ಮಾತರಂ ಹಾಡಿದರು. ಜಗದೀಶ್ ಆಚಾರ್ಯ ವೈಯಕ್ತಿಕ ಗೀತೆ ಹಾಡಿದರು.
ಬಿಜೆಪಿ ಮುಖಂಡರಾದ ಪ್ರಕಾಶ್ ಹೆಗ್ಡೆ, ಸುಲೋಚನಾ ಭಟ್, ಅಡ್ಡಂತ್ತಡ್ಕ ದೇರಣ್ಣ ಗೌಡ, ಚನಿಯ ಕಲ್ತಡ್ಕ, ಶೀಲಾವತಿ ಮಾಧವ, ಜಿ.ಪಂ.ಸದಸ್ಯರಾದ ಎಸ್.ಎನ್.ಮನ್ಮಥ, ಹರೀಶ್ಕಂಜಿಪಿಲಿ, ಆಶಾತಿಮ್ಮಪ್ಪ ಮೊದಲಾದವರು ವೇದಿಕೆಯಲ್ಲಿದ್ದರು.