ತುಮಕೂರು, ಮೇ 07 : ಇಲ್ಲಿನ ಕ್ಯಾತಸಂದ್ರ ಜಾಸ್ ಟೋಲ್ ಬಳಿ ಖಾಸಗಿ ಬಸ್ನಲ್ಲಿ 2.98 ಕೋಟಿ ಹಣ ಪತ್ತೆಯಾಗಿದೆ. ಪೊಲೀಸ್ ಕಂಟ್ರೋಲ್ ರೂಂ ಗೆ ಬಂದ ಖಚಿತ ಮಾಹಿತಿ ಮೇರೆಗೆ ಪೊಲೀಸರು ಗಜಾನನ ಹೆಸರಿನ ಖಾಸಗಿ ಬಸ್ ತಡೆದು ಪರಿಶೀಲಿಸಿದಾಗ 2.98 ಕೋಟಿ ಪತ್ತೆಯಾಗಿದೆ.
ಮದ್ಯರಾತ್ರಿ ಸುಮಾರು 1.30 ಕ್ಕೆ ಈ ದಾಳಿ ನಡೆದಿದೆ. ಸೂಕ್ತ ದಾಖಲೆಗಳಿಲ್ಲದೆ ದೊಡ್ಡಮೊತ್ತದ ಹಣ ಸಾಗಿಸಲಾಗುತ್ತಿದ್ದು, ಬಸ್ಸಿನಲ್ಲಿ ಸಾಗಾಟ ಮಾಡೋದ್ರಿಂದ ತಪಾಸಣೆ ಮಾಡುವ ಸಾಧ್ಯತೆ ತೀರಾ ಕಡಿಮೆ ಎಂದು ಸಾಗಾಟಗಾರರು ತಿಳಿದಿದ್ದರು ಎನ್ನಲಾಗಿದೆ. ಸದ್ಯ ಹಣ ವಶಕ್ಕೆ ಪಡೆಯಲಾಗಿದ್ದು, ಚುನಾವಣಾ ಅಧಿಕಾರಿಗಳು ಹಾಗೂ ಪೊಲೀಸರು ಮುಂದಿನ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.