ಮಂಗಳೂರು, ಮೇ 06: ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಹಾಗೂ ಖ್ಯಾತ ವೈದ್ಯ ಡಾ ವೈ ಭರತ್ ಶೆಟ್ಟಿ ಅವರ ಮೇಲೆ ಕಾಂಗ್ರೆಸ್ ಮುಖಂಡ ದೇವಿಪ್ರಸಾದ್ ಶೆಟ್ಟಿ ಬೆಳಪು ಇವರ ಮೇಲೆ ಯಾವುದೇ ಆಧಾರವಿಲ್ಲದೆ ಭ್ರಷ್ಟಾಚಾರ ಆರೋಪ ಹೊರಿಸಿರುವುದನ್ನು ಅಖಿಲ ಭಾರತೀಯ ದಂತವೈದ್ಯ ಮಂಡಳಿ ಖಂಡಿಸಿದೆ.
ಚುನಾವಣೆ ಸಂದರ್ಭದಲ್ಲಿ ಇಂತಹ ಆರೋಪ ಮಾಡಿ ಗೌರವಾನ್ವಿತ ಪ್ರತಿಷ್ಠಿತ ವೈದ್ಯರ ಸಾರ್ವಜನಿಕ ಬದುಕಿಗೆ ಕಳಂಕ ಹಚ್ಚಲು ಯತ್ನಿಸುವ ಕೆಲಸ ಸರಿಯಲ್ಲ. ಇದನ್ನು ಅಖಿಲ ಭಾರತೀಯ ದಂತವೈದ್ಯ ಮಂಡಳಿ ಸದಸ್ಯನಾಗಿ ಖಂಡಿಸುವುದಾಗಿ ಡಾ ಶಿವಶರಣ್ ಹೇಳಿದ್ದಾರೆ. ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಡಾ ಭರತ್ ಶೆಟ್ಟಿ ಓರ್ವ ಪ್ರತಿಷ್ಠಿತ ವೈದ್ಯರಾಗಿದ್ದು, ಅವರ ವಿರುದ್ಧ ಯಾವುದೇ ಪ್ರಕರಣಗಳಿಲ್ಲ. ಇವರ ವಿರುದ್ಧ ಆರೋಪ ಮಾಡುವುದು ಚುನಾವಣೆಯಲ್ಲಿ ಸೋಲಿನ ಹತಾಶೆಯ ಪ್ರತೀಕವಾಗಿದೆ. ಕಾಂಗ್ರೆಸ್ಗೆ ಲಾಭ ಮಾಡಿಕೊಡುವ ಇಂತಹ ಉದ್ದೇಶ ಫಲಿಸಲ್ಲ ಎಂದು ಹೇಳಿದರು.