ಮಂಗಳೂರು, ಮೇ 06 : ಕರಾವಳಿಗೆ ಚುನಾವಣೆಗೆ ಮೊದಲೇ ಆಘಾತ ಎದುರಾಗಿದ್ದು, ಮತ್ತೆ ನದಿ ಜೋಡಣೆಯ ಆತಂಕ ಮತ್ತೆ ಕಾಡತೊಡಗಿದೆ. ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೇತ್ರಾವತಿ ನದಿ ಮತ್ತು ಹಾಸನ ಹೇಮಾವತಿ ನದಿ ಜೋಡಣೆಯ ಮೂಲಕ ಸಮಗ್ರ ನೀರಾವರಿ ಯೋಜನೆಯ ಪ್ರಸ್ತಾಪ ಮಾಡಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಜನರಲ್ಲಿ ಮತ್ತು ಪರಿಸರವಾದಿಗಳಲ್ಲಿ ಆತಂಕ ಸೃಷ್ಟಿ ಮಾಡಿದೆ.
ಅಭಿವೃದ್ದಿಯ ಹೆಸರಿನಲ್ಲಿ ನಡೆಯುತ್ತಿರುವ ಯೋಜನೆಗಳಿಂದ ಪ್ರಾಕೃತಿಕ ಸಂಪತ್ತುಗಳು ನಾಶವಾಗುತ್ತಿರುವ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿಲ್ಲ ಎನ್ನುವ ಬೇಸರ ಪರಿಸರವಾದಿಗಳದ್ದು, ಇದಕ್ಕಾಗಿಯೇ ಅವರು ಚುನಾವಣೆಯಲ್ಲಿ ನೋಟಾ ಚಲಾಯಿಸಲು ಚಿಂತಿಸಿದ್ದಾರೆ. ನದಿ ಜೋಡಣೆಯಲ್ಲಿ ಅನುಕೂಲತೆಗಳು ಇರುವಂತೆ ಅನಾನುಕೂಲತೆಯೂ ಹೆಚ್ಚು ಇದೆ. ಹೀಗಾಗಿ ಈ ಯೋಜನೆಯ ಬಗ್ಗೆ ವಿವರವಾದ ಅಧ್ಯಯನ ಅಗತ್ಯವಿದೆ ಎನ್ನುವುದು ಪರಿಸರ ಹೋರಾಟಗಾರರ ಮಾತು .