ಕಾಸರಗೋಡು, ಸೆ23: ಮನೆಯ ಬೀಗ ಮುರಿದು ಒಳನುಗ್ಗಿ ಬೆಳ್ಳಿ ಆಭರಣ ಮತ್ತು ತಾಮ್ರದ ಪಾತ್ರೆಗಳನ್ನು ಕಳವುಗೈದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಪೆರ್ಲ ನಲ್ಕದ ಪ್ರಕಾಶ್ ನಾಯ್ಕ್ ಎಂದು ಗುರುತಿಸಲಾಗಿದೆ. ಅಡ್ಯನಡ್ಕದಲ್ಲಿ ಬೇಕರಿ ಮಾಲಕರಾಗಿರುವ ನಲ್ಕದ ರಾಘವೇಂದ್ರ ರಾವ್ ಎಂಬವರ ಮನೆಗೆ ನುಗ್ಗಿ ಕೃತ್ಯ ನಡೆಸಲಾಗಿತ್ತು. ಸೆ. 13ರಂದು ಈ ಘಟನೆ ನಡೆದಿದ್ದು, ಆರೋಪಿ ಪ್ರಕಾಶ್ ನಾಯ್ಕ್ ತಲೆ ಮರೆಸಿಕೊಂಡಿದ್ದ. ಇದೀಗ ಪೊಲೀಸರ ಅತಿಥಿಯಾಗಿರುವ ಪ್ರಕಾಶ್ ನಾಯ್ಕ್ ವಿಚಾರಣೆ ವೇಳೆ ಕಳವುಗೈದಿರುವುದು ನಾನೇ ಎಂದು ತಪ್ಪೊಪ್ಪಿಕೊಂಡಿದ್ದಾನೆ.