ಮಂಗಳೂರು ಮೇ 04: ಪ್ರದಾನಿ ನರೇಂದ್ರ ಮೋದಿ ವಿರುದ್ದ ಹೇಳಿಕೆಗಳನ್ನು ನೀಡುತ್ತಿರುವ ನಟ ಪ್ರಕಾಶ ರೈ ವಿರುದ್ದ ಹುಚ್ಚ ವೆಂಕಟ್ ಕಿಡಿಕಾರಿದ್ದಾರೆ.
ನಗರದಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಅವರು, ನಟ ಪ್ರಕಾಶ್ ರೈ ಕೇವಲ ಪ್ರಚಾರಕ್ಕೆ ಬೇಕಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾತನಾಡುತ್ತಾನೆ. ಪ್ರಕಾಶ್ ರೈ ನನ್ನ ಎಕ್ಕಡಕ್ಕೆ ಸಮಾನ . ಪ್ರಕಾಶ್ ರೈ ಮಾತ್ರನಾ..? ನಾಯಿನು ಕೂಡ ಡೈಲಾಗ್ ಹೊಡೆಯುತ್ತೆ ಎಂದು ಹೇಳಿಕೆ ನೀಡಿದ್ದಾರೆ.
ನೀನು ನೀಡುವ ಹೇಳಿಕೆಯಿಂದ ಮೋದಿ ಅವರಿಗೆ ಏನೂ ಆಗಲ್ಲ. ನೀನು ನೀಡುವುದು ಬರೀ ದರಿದ್ರ ಸ್ಟೇಟ್ ಮೆಂಟ್. ಪ್ರಧಾನಿ ನರೇಂದ್ರ ಮೋದಿ ಬಗ್ಗೆ ಮಾತನಾಡುವ ಯೋಗ್ಯತೆ ನಿನಗಿಲ್ಲ. ಮೋದಿ ಅವರು ಜನತೆಗೆ ಒಳ್ಳೆಯ ಕೆಲಸ ಮಾಡಿದ್ದಾರೆ. ಆದರೆ ನೀನು ಏನು ಮಾಡಿದ್ದಿ..? ಎಷ್ಟು ಜನರಿಗೆ ಊಟ ಹಾಕಿದ್ದಿ..? ಎಂದು ಪ್ರಶ್ನಿಸಿದ್ದಾರೆ.
ನಾನು ಆರ್.ಆರ್ ನಗರ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ಗಂಡು ಮಕ್ಕಳ ಚಪ್ಪಲಿ ಚಿಹ್ನೆ ನನ್ನ ಗುರುತು. ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ಮಾತ್ರವಲ್ಲ ಮುಂದೆ ನಾನೇ ಪ್ರಧಾನಿಯಾಗುವುದು ಎಂದು ಹೇಳಿದ್ದಾರೆ.