ಪಾಕಿಸ್ಥಾನ, ಭಾರತಕ್ಕೆ ಬೆದರಿಕೆ ಹಾಕಿದ ಬೆನ್ನಲ್ಲೆ ವಿಶ್ವಸಂಸ್ಥೆಯಲ್ಲೇ ಅದರ ಮುಖಭಂಗ ಭಾರತ ಮಾಡಿದೆ. 'ಕಿರು ವ್ಯಾಪ್ತಿಯ ಅಣ್ವಸ್ತ್ರಗಳನ್ನು ಭಾರತೀಯ ಸೇನೆಯ ವಿರುದ್ಧ ಬಳಸುತ್ತೇವೆ' ಎಂದ ಪಾಕ್ ಪ್ರಧಾನಿ ಶಾಹೀದ್ ಖಕಾನ್ ಅಬ್ಬಾಸಿ ಬೆದರಿಕೆಗೆ ವಿಶ್ವಸಂಸ್ಥೆಯಲ್ಲಿ ದಿಟ್ಟ ತಿರುಗೇಟು ನೀಡಿರುವ ಭಾರತ , ಪಾಕಿಸ್ಥಾನವನ್ನು 'ಟೆರರಿಸ್ಥಾನ್' ಎಂದು ಕರೆದಿದೆ. ಉಗ್ರರ ಕಾರ್ಖಾನೆಗಳಲ್ಲಿ ಉಗ್ರರನ್ನು ಉತ್ಪಾದನೆ ಮಾಡಿ ಜಗತ್ತಿಗೆ ರಫ್ತು ಮಾಡುತ್ತಿದೆ'ಎಂದು ವಿಶ್ವಸಂಸ್ಥೆಯ ಭಾರತದ ಮೊದಲ ಕಾರ್ಯದರ್ಶಿ ಯೆನಾಮ್ ಗಂಭೀರ್ ಕಿಡಿ ಕಾರಿದ್ದಾರೆ.
ಇಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು ಒಸಮಾ ಬಿನ್ ಲಾಡೆನ್, ಮುಲ್ಲಾ ಓವರ್ಗೆ ರಕ್ಷಣೆ ನೀಡಿದ ದೇಶ, 26/11 ದಾಳಿಯ ಮಾಸ್ಟರ್ಮೈಂಡ್ ಹಫೀಜ್ ಸಯೀದ್ ಪಾಕ್ನಲ್ಲಿ ಸ್ವತಂತ್ರವಾಗಿ ತಿರುಗಾಡುತ್ತಿದ್ದಾನೆ. ಜಾಗತಿಕ ಉಗ್ರರನ್ನು ಉತ್ಪಾದಿಸುವುದು ಪಾಕಿಸ್ಥಾನದ ಮುಖ್ಯ ಗುರಿಯಾಗಿದ್ದು, ಉಗ್ರರಿಗೆ ಸುರಕ್ಷಿತ ತಾಣಗಳನ್ನು ನೀಡುತ್ತಿದೆ. ಉಗ್ರ ಸಂಘಟನೆಗಳ ಮುಖಂಡರು ಪಾಕ್ ಮಿಲಿಟರಿ ಮತ್ತು ರಾಜಕಾರಣಿಗಳೊಂದಿಗೆ ಉತ್ತಮ ನಂಟು ಹೊಂದಿದ್ದಾರೆ' ಎಂದು ಪಾಕ್ ಮಾನ ಹರಾಜು ಹಾಕಿದ್ದಾರೆ.