ಮಂಗಳೂರು, ಮೇ 01 : ಭೂಗತ ಪಾತಕಿ ರವಿ ಪೂಜಾರಿ ಸಹಚರ ಸತೀಸ್ ಭಂಡಾರಿಗೆ ನ್ಯಾಯಾಲಯ ಏಳು ವರ್ಷ ಕಠಿಣ ಜೈಲು ಶಿಕ್ಷೆ ಆದೇಶ ಹೊರಡಿಸಿದೆ. 2008 ರ ಅಕ್ಟೋಬರ್ ತಿಂಗಳಲ್ಲಿ ಕೂಳೂರಿನ ಸಿಪ್ಪಿಂಗ್ ಉದ್ಯಮ ಸಂಸ್ಥೆಯೊಂದರಲ್ಲಿ ನಡೆದಿದ್ದ ಗುಂಡಿನ ದಾಳಿ ಪ್ರಕರಣದಲ್ಲಿ ಭಾಗಿಯಾಗಿದ್ದ ಭೂಗತ ಪಾತಾಕಿ ರವಿ ಪೂಜಾರಿ ಸಹಚರನಾಗಿದ್ದು, ಈತ ಮೂಲತಃ ಮೂಡುಬಿದಿರೆಯವನಾಗಿದ್ದಾನೆ.
ಕೂಳೂರಿನಲ್ಲಿ ವಲ್ಡ್ ವೈಡ್ ಶಿಪ್ಪಿಂಗ್ ಇಂಕ್ ಎಂಬ ಸಂಸ್ಥೆ ಹೊಂದಿದ್ದ ಮೊಯಿದ್ದೀನ್ ಎಂಬವರಿಗೆ, ಹಫ್ತಾ ನೀಡುವಂತೆ ಬೆದರಿಕೆ ಹಾಕುತ್ತಿದ್ದ. ಆದರೆ ಉದ್ಯಮಿ ಹಣ ನೀಡಿರಲಿಲ್ಲ. ಅವರನ್ನು ಕೊಲೆ ಮಾಡುವಂತೆ ರವಿ ಪೂಜಾರಿ ತನ್ನ ಸಹಚರಿಗೆ ಸೂಚನೆ ನೀಡಿದ್ದ. ಅಂತೆಯೇ ಸತೀಸ್ ಭಂಡಾರಿ ಮತ್ತು ಆತನ ಸ್ನೇಹಿತರು 2008 ರ ಅಕ್ಟೋಬರ್ 20 ರಂದು ಅವರ ಕಚೇರಿಗೆ ನುಗ್ಗಿ ಉಧ್ಯಮಿಗಾಗಿ ಹುಡುಕಾಡಿದ್ದ. ಆದರೆ ಉದ್ಯಮಿ ಸ್ಥಳದಲ್ಲಿ ಇರದ ಕಾರಣ ಆತನ ನೌಕರರಿಗೆ ಪಿಸ್ತೂಲ್ ತೋರಿಸಿ ಬೆದರಿಸಿ, ನೆಲಕ್ಕೆ ಗುಂಡು ಹಾರಿಸಿದ್ದ. ಈ ಎಲ್ಲಾ ಘಟನೆಗೆ ಸಂಬಂಧಪಟ್ಟಂತೆ ದೂರು ದಾಖಲಾಗಿತ್ತು. 2008 ರ ಡಿ .10 ರಂದು ಸತೀಸ್ ಭಂಡಾರಿಯನ್ನು ಮಂಗಳೂರಿನಲ್ಲಿ ಪೊಲೀಸರು ಬಂಧಿಸಿ ಪೊಲೀಸರು ಎಲ್ಲಾ ಅರೋಪಿಗಳ ವಿರುದ್ದ ಆರೋಪಪಟ್ಟಿ ಸಲ್ಲಿಸಿದ್ದರು.