ಉಡುಪಿ, ಆ. 15 (DaijiworldNews/MB) : ಉಡುಪಿ ಜಿಲ್ಲೆಯಲ್ಲಿ ಶನಿವಾರ ಮತ್ತೆ 241 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 7731 ಕ್ಕೆ ಏರಿಕೆಯಾಗಿದೆ.
241 ಸೋಂಕಿತರ ಪೈಕಿ 191 ಕೊರೊನಾ ಗುಣಲಕ್ಷಣಗಳು ಇದ್ದು 50 ಮಂದಿಗೆ ಯಾವುದೇ ರೋಗ ಲಕ್ಷಣಗಳು ಇಲ್ಲ. ಇನ್ನು 130 ಮಂದಿಗೆ ಸಂಪರ್ಕದಿಂದ ಸೋಂಕು ತಗುಲಿದ್ದರೆ, 40 ಐಎಲ್ಐ ಪ್ರಕರಣವಾಗಿದೆ. ಇನ್ನೂ 71 ಮಂದಿಯ ಸೋಂಕಿನ ಮೂಲ ಪತ್ತೆಯಾಗಬೇಕಿದೆ. ಇಂದು 138 ಪ್ರಕರಣ ಉಡುಪಿಯಲ್ಲಿ, 70 ಕುಂದಾಪುರದಲ್ಲಿ, 30 ಕಾರ್ಕಳದಲ್ಲಿ ದೃಢಪಟ್ಟಿದ್ದು 3 ಪ್ರಕರಣಗಳು ಇತರ ಜಿಲ್ಲೆಯದ್ದಾಗಿದೆ.
ಇನ್ನು ಶನಿವಾರ ಇಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. 65 ವರ್ಷದ ಹಾಗೂ 43 ವರ್ಷದ ಕೊರೊನಾ ಸೋಂಕಿತ ಗಂಡಸರು ಇಂದು ಸಾವನ್ನಪ್ಪಿದ್ದು ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 77 ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿಂದು 229 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು ಈವರೆಗೆ ಸೋಂಕಿನಿಂದ 5101 ಮಂದಿ ಗುಣಮುಖರಾಗಿದ್ದಾರೆ.
ಶನಿವಾರ 1556 ಮಂದಿಯ ವರದಿ ನೆಗೆಟಿವ್ ಆಗಿದೆ. ಇನ್ನು ಕೂಡಾ 1475 ವರದಿಗಳು ಬಾಕಿಯಿದೆ. 2560 ಸಕ್ರಿಯ ಪ್ರಕರಣಗಳಾಗಿವೆ.