ಮಂಗಳೂರು,ಸೆ21: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ದಿಂದ 170 ಮಂದಿ ಪ್ರಯಾಣಿಕರನ್ನು ಹೊತ್ತು ದೋಹಾ ಕ್ಕೆ ಇಂದು ಸಂಜೆ ಹೊರಟಿದ್ದ ವಿಮಾನ ತಾಂತ್ರಿಕ ದೋಷದಿಂದ , ಟೇಕ್ ಆಫ್ ಅದಾ ಕೆಲವೇ ತಾಸಿನಲ್ಲಿ ತುರ್ತು ಭೂ ಸ್ಪರ್ಶವಾದ ಘಟನೆ ಸಂಭವಿಸಿದೆ.
ಏರ್ ಇಂಡಿಯಾ ಎಕ್ಸ್ ಪ್ರೆಸ್ ಎಕ್ಸ್ 821 ವಿಮಾನವು ಗುರುವಾರ ಸಂಜೆ ದೋಹಾ ಕಡೆಗೆ ಹೊರಟ್ಟಿತ್ತು. ಅದರೆ ವಿಮಾನ ಹಾರಾಟ ಆರಂಭಿಸದ ಅರ್ಧ ತಾಸಿನಲ್ಲೆ ವಿಮಾನದ ಒಂದು ಇಂಜಿನ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ ಪೈಲೆಟ್ ಮತ್ತೆ ವಿಮಾನವನ್ನು ಮಂಗಳೂರು ವಿಮಾನ ನಿಲ್ದಾಣಕ್ಕೆ ಹಿಂದಿರುಗಿಸಿದ್ದಾನೆ. ಪ್ರಯಾಣಿಕರೆಲ್ಲಾರು ಸುರಕ್ಷಿತರಾಗಿದ್ದಾರೆ. ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗುವುದು ಎಂದಿದ್ದಾರೆ.