ಮುಂದಿನವಾರ ಇರಲಿದೆ ಸಾಲು ಸಾಲು ರಜೆ. ಹೀಗಾಗಿ ಬ್ಯಾಂಕ್ ನಲ್ಲಿ ನಿಮ್ಮ ಯಾವುದೇ ಕೆಲಸಗಳಿದ್ದಲ್ಲಿ ಮೊದಲೇ ಮುಗಿಸಿಕೊಳ್ಳುವುದು ಒಳ್ಳೆಯದು. ಸೆಪ್ಟಂಬರ್ 28 ರಂದು ನಿರ್ಬಂಧಿತ ರಜೆ, ಸೆಪ್ಟಂಬರ್ 29 ರಂದು ಆಯುಧ ಪೂಜೆ, ಸೆಪ್ಟಂಬರ್ 30 ರಂದು ವಿಜಯದಶಮಿ, ಅಕ್ಟೋಬರ್ 1 ರಂದು ಭಾನುವಾರ, ಅಕ್ಟೋಬರ್ 2 ರಂದು ಗಾಂಧಿ ಜಯಂತಿ ಹೀಗೆ 5 ದಿನಗಳ ಕಾಲ ಬ್ಯಾಂಕ್ ರಜೆ ಇರುವುದರಿಂದ ಹಬ್ಬದ ವೇಳೆಯಲ್ಲಿ ಹಣಕಾಸಿನ ಕೊರತೆ , ಚೆಕ್ ಕ್ಲಿಯರೆನ್ಸ್, ನಗದು ಜಮೆಗೆಗೂ ತೊಂದರೆಯಾಗಲಿದೆ. ಇನ್ನು ಎ.ಟಿ.ಎಂ.ಗಳಲ್ಲಿಯೂ ಹಣದ ಕೊರತೆ ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಬ್ಯಾಂಕಿಂಗ್ ವ್ಯವಹಾರಗಳ ಕುರಿತಾಗಿ ಈಗಲೇ ಪ್ಲಾನ್ ಮಾಡಿಕೊಳ್ಳುವುದು ಒಳ್ಳೆಯದು.