ಮಂಗಳೂರು, ಏ 21: ಹಲವಾರು ಕೋಟಿ ರೂ. ವೆಚ್ಚದಲ್ಲಿ ಕಾಮಾರಿಗಳನ್ನು ಅನುಷ್ಠಾನಗೊಳಿಸಿದ ಶಾಸಕರಾದ ಶ್ರೀ ಕೆ. ಅಭಯಚಂದ್ರ ಜೈನ್ ಅವರಿಗೆ ಕೃತಜ್ಞತಾ ಕಾರ್ಯಕ್ರಮ ನಡೆಯಿತು.
ಹಳೆಯಂಗಡಿ ಸಿ.ಎಸ್.ಐ ಅಮ್ಮನ್ನ್ ಮೆಮೋರಿಯಲ್ ಚರ್ಚ್ ನಿಯೋಗವು ರೇ. ಸೆಬ್ಯಾಸ್ಟೀನ್ ಜತ್ತನರವರ ನೇತ್ರತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಜನಪರ ಕಾರ್ಯಗಳನ್ನು ಮಾಡಿ, ಜನರ ಮೆಚ್ಚುಗೆಗೆ ಪಾತ್ರರಾದ ಶಾಸಕ ಅಭಯಚಂದ್ರ ಜೈನ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು.
ಸುಮಾರು 1.10 ಕೋಟಿ ರೂ. ವೆಚ್ಚದಲ್ಲಿ ಹಳೆಯಂಗಡಿ ಪರಿಸರದ ಕೊಳುವೈಲು ಪಡುಹಿತ್ಲು ರಸ್ತೆ ಕಾಂಕ್ರೀಟಿಕರಣ, 7 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣವಾದ ಹಳೆಯಂಗಡಿ, ಕದಿಕೆ, ಸಸಿಹಿತ್ಲು ಸಂಪರ್ಕ ಸೇತುವೆ, 1.00 ಕೋಟಿ ವೆಚ್ಚದಲ್ಲಿ ಹಳೆಯಂಗಡಿ ಕೆಲಸಿಬೆಟ್ಟು, ಸಾಗ್ ರಸ್ತೆ ಕಾಂಕ್ರೀಟಿಕರಣ ಹಾಗೂ ಕ್ರೈಸ್ತ ಸಮಾಧಿ ಸ್ಥಳದ ರಸ್ತೆ ಕಾಂಕ್ರೀಟಿಕರಣ ಹೀಗೆ ಮೊದಲಾದ ಹತ್ತು ಹಲವು ಕಾಮಾಗಾರಿಗಳನ್ನು ಶಾಸಕರಾದ ಶ್ರೀ ಕೆ. ಅಭಯಚಂದ್ರ ಜೈನ್ ಅನುಷ್ಠಾನಗೊಳಿಸಿದ್ದರು.
ಈ ಹಿನ್ನೆಲೆ ಕಾಲಮಿತಿಯೊಳಗೆ ವಿವಿಧ ಅಭಿವೃದ್ಧಿ ಕಾಮಾಗಾರಿಗಳನ್ನು ಕೈಗೊಂಡು ಸಾಮಾಜಿಕ ನ್ಯಾಯ ಒದಗಿಸಿಕೊಟ್ಟ ಅಭಯಚಂದ್ರ ಜೈನ್ ಅವರಿಗೆ ಕೃತಜ್ಞತೆಯನ್ನು ಸಲ್ಲಿಸಲಾಯಿತು.