ಕಾರ್ಕಳ, ಏ 20 : ಮುನಿಯಲು ಉದಯ್ ಕುಮಾರ್ ಶೆಟ್ಟಿ ಅವರಿಗೆ ಕಾರ್ಕಳ ವಿಧಾನಸಭಾ ಕ್ಷೇತ್ರದ ಟಿಕೇಟು ನೀಡಬೇಕೆಂಬ ಅವರ ಬೆಂಬಲಿಗರ ಹಾಗೂ ಕಾಂಗ್ರೆಸ್ ಕಾರ್ಯಕರ್ತರ ಒತ್ತಡದ ತಂತ್ರ ಮುಂದುವರಿದಿದೆ.ಮುನಿಯಾಲು ಅವರಿಗೆ ಟಿಕೇಟು ನೀಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು ವ್ಯಾಪಕ ಪ್ರತಿಭಟನೆ ನಡೆಸುವ ಮೂಲಕ ಕಾಂಗ್ರೆಸ್ ಬಿನ್ನಮತವನ್ನು ಬೀದಿಗೆ ಎಳೆದು ತಂದಿದ್ದಾರೆ.
ಆದ್ರೆ ಮುನಿಯಾಲು ಬೆಂಬಲಿಗರ ವಿರೋಧಕ್ಕೆ ಕಾಂಗ್ರೆಸ್ ಹೈಕಮಾಂಡ್ ಕಿವಿಕೊಟ್ಟಿಲ್ಲ. ಈ ಹಿನ್ನಲೆಯಲ್ಲಿ 300ಕ್ಕೂ ಅಧಿಕ ಮುನಿಯಾಲು ಬೆಂಬಲಿಗರು ಉಡುಪಿ ಜಿಲ್ಲಾ ಕಂಗ್ರೆಸ್ ಕಚೇರಿಗೆ ಬೇಟಿ ನೀಡಿ ಮುನಿಯಾಲು ಉದಯ್ ಕುಮಾರ್ ಶೆಟ್ಟಿಗೆ ಟಿಕೇಟು ನೀಡುವಂತೆ ಜಿಲ್ಲಾದ್ಯಕ್ಷರಿಗೆ ಮನವಿ ಮಾಡಿದ್ದಾರೆ.
ಭಂಡಾರಿಯವರಿಗೆ ಟಿಕೇಟು ನೀಡಿದ್ದು ಸರಿಯಲ್ಲ. ಗೋಪಾಲ ಭಂಡಾರಿ ಅವರನ್ನು ಸ್ಪರ್ದೆಯಿಂದ ಹಿಂದೆ ಸರಿಸಿ ಮುನಿಯಾಲು ಅವರಿಗೆ ಟಿಕೇಟು ನೀಡಬೇಕು. ಇಲ್ಲವಾದ್ದಲ್ಲಿ ಬಂಡಾಯ ಅಭ್ಯರ್ಥಿಯಾಗಿ ಮುನಿಯಾಲು ಸ್ಪರ್ಧಿಸಲಿದ್ದಾರೆ ಎಂದು ಕಾರ್ಯಕರ್ತರು ಎಚ್ಚರಿಸಿದ್ದಾರೆ. ಇನ್ನು ಇತ್ತ ಇಂದು ಗೋಪಾಲ್ ಭಂಡಾರಿಯವರು ಮಧ್ಯಾಹ್ನ 2 ರ ವೇಳೆಗೆ ನಾಮಪತ್ರ ಸಲ್ಲಿಸಲಿದ್ದಾರೆ. ಕಚೇರಿಯಿಂದ ಹೊರಡು ಬೃಹತ್ ಮೆರವಣಿಗೆ ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೆಚ್.ಗೋಪಾಲಭಂಡಾರಿ ತಿಳಿಸಿದ್ದಾರೆ.