ಕುಂದಾಪುರ, ಏ 19: ಆಸ್ಟ್ರೆಲೀಯಾದ ಗೋಲ್ಡ್ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತಕ್ಕೆ ಮೊದಲ ಪದಕ ಗೆದ್ದು ಕೊಟ್ಟ ಕುಂದಾಪುರ ತಾಲೂಕಿನ ಚಿತ್ತೂರಿನ ಗುರುರಾಜ್ ಅವರಿಗೆ ಕುಂದಾಪುರದ ಹರ್ಕ್ಯುಲಸ್ ಜಿಮ್ ವತಿಯಿಂದ ಗುರುವಾರ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದನೆ ಸಲ್ಲಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಗುರುರಾಜ್, ನಾನು ಈ ಮಟ್ಟದ ಸಾಧನೆ ಮಾಡಲು ಹೆತ್ತವರು, ಗುರುಗಳು, ಊರವರು, ರಾಜ್ಯದ ಜನರ ಆಶೀರ್ವಾದವೇ ಕಾರಣ. ಎಲ್ಲರ ಪ್ರೋತ್ಸಾಹಕ್ಕೆ ಆಭಾರಿಯಾಗಿದ್ದೇನೆ. ನಿಮ್ಮೆಲ್ಲರ ಆಶೀರ್ವಾದವಿದ್ದರೆ ಮುಂದೆಯೂ ಇನ್ನಷ್ಟು ಪದಕಗಳನ್ನು ದೇಶಕ್ಕಾಗಿ ಗೆದ್ದು ತರುತ್ತೇನೆ ಎಂದವರು ಹೇಳಿದರು.
ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅಭಿನಂದಿಸಿ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಭೆ, ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಕೀರ್ತಿ ತಂದಿರುವುದು ಕುಂದಾಪುರದ ಹೆಮ್ಮೆ. ನಿಜಕ್ಕೂ ಇದೊಂದು ಅದ್ಭುತ ಸಾಧನೆ. ನಾವೆಲ್ಲ ಸಂಭ್ರಮಿಸಬೇಕಾದ ಕ್ಷಣ ಎಂದು ಹೇಳಿದರು.
ಕುಂದಾಪುರ ಎಸ್ಐ ಹರೀಶ್ ಆರ್., ರಮೇಶ್ ಕಾಂಚನ್, ವಿಠಲ, ಉದ್ಯಮಿ ಶ್ರೀಶನ್, ಮಹಮ್ಮದ್ ಆರೀಫ್, ಗುರುರಾಜ್ ತಂದೆ ಮಹಾಬಲ ಪೂಜಾರಿ, ಮೊದಲ ದೈಹಿಕ ಶಿಕ್ಷಣ ಶಿಕ್ಷಕ ಸುಕೇಶ್ ಹೆಗ್ಡೆ, ಮತ್ತಿತರರು ಉಪಸ್ಥಿತರಿದ್ದರು. ಹರ್ಕ್ಯುಲಸ್ ಜಿಮ್ನ ಸತೀಶ್ ಕಾರ್ಯಕ್ರಮ ನಿರ್ವಹಿಸಿದರು.
ಬಿಲ್ಲವ ಸಂಘದಿಂದ ಗುರುರಾಜ್ಗೆ ಅಭಿನಂದನೆ
ಗೋಲ್ಡ್ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬೆಳ್ಳಿ ಪದಕ ವಿಜೇತ ಕುಂದಾಪುರ ತಾಲೂಕಿನ ಚಿತ್ತೂರಿನ ಗುರುರಾಜ್ ಅವರಿಗೆ ಕುಂದಾಪುರ ತಾಲೂಕು ಬಿಲ್ಲವ ಸಂಘದ ವತಿಯಿಂದ ಗುರುವಾರ ನಾರಾಯಣ ಗುರು ಮಂದಿರದಲ್ಲಿ ಅಭಿನಂದನೆ ಸಲ್ಲಿಸಲಾಯಿತು.ಕುಂದಾಪುರದ ಶಾಸ್ತ್ರಿ ಸರ್ಕಲ್ನಿಂದ ಮೆರವಣಿಗೆ ಮೂಲಕ ಸಾಗಿ ಬಂದ ಗುರುರಾಜ್ ಅವರನ್ನು ಬಿಲ್ಲವ ಸಂಘದ ಮುಖಂಡರು ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಬಿಲ್ಲವ ಸಂಘದ ಪ್ರ. ಕಾರ್ಯದರ್ಶಿ ಮಂಜು ಬಿಲ್ಲವ, ಮುಖಂಡರಾದ ನಾರಾಯಣ ಬಿಲ್ಲವ, ಕಲ್ಪನಾ ಭಾಸ್ಕರ್, ಯುಬವಕರ ಮಂಡಲದ ಅಧ್ಯಕ್ಷ ಅಶೋಕ ಪೂಜಾರಿ, ಕಾರ್ಯದರ್ಶಿ ಅಜಿತ್ ಪೂಜಾರಿ, ದಿವಾಕರ್, ರಾಜೇಶ್, ಸುಮನಾ ಬಿದ್ಕಲ್ಕಟ್ಟೆ, ಟಿ.ಕೆ. ಕೋಟ್ಯಾನ್, ಮನೋಜ್ ನಾಯರ್, ಗುರುರಾಜ್ ತಂದೆ ಮಹಾಬಲ ಪೂಜಾರಿ, ಸಂಬಂಽಕರು ಸೇರಿದಂತೆ ಅನೇಕ ಮಂದಿ ಉಪಸ್ಥಿತರಿದ್ದರು.