ಮಂಗಳೂರು, ಎ. 19: ಕರ್ನಾಟಕ ವಿಧಾನ ಸಭಾ ಚುನಾವಣಾ ಹಿನ್ನೆಲೆ ಮಂಗಳೂರು ಉತ್ತರ ವಿಧಾನ ಸಭಾ ಕ್ಷೇತ್ರದಿಂದ ಸಿಪಿಐಎಮ್ ಅಭ್ಯರ್ಥಿ ಮುನೀರ್ ಕಾಟಿಪಳ್ಳ ನಾಮಪತ್ರ ಸಲ್ಲಿಸಿದ್ದಾರೆ. ಪಿವಿಎಸ್ ವೃತ್ತದಿಂದ ಮಂಗಳೂರು ಮಹಾ ನಗರ ಪಾಲಿಕೆ ಕಚೇರಿ ತನಕ ಕಾರ್ಯಕರ್ತರೊಂದಿಗೆ ಆಗಮಿಸಿದ ಮುನೀರ್ ಬಳಿಕ ಪಾಲಿಕೆಯಲ್ಲಿರುವ ಚುನಾವಣಾಧಿಕಾರಿ ಎಸ್.ಬಿ ಪ್ರಶಾಂತ್ ಕುಮಾರ್ ಅವರಿಗೆ ನಾಮಪತ್ರ ಸಲ್ಲಿಸಿದ್ದಾರೆ.
ಬಳಿಕ ಮಾತನಾಡಿದ ಮುನೀರ್ ಕಾಟಿಪಳ್ಳ ಅವರು ಹಣ ಖರ್ಚು ಮಾಡುವ ಪ್ರಶ್ನೆಯೇ ಇಲ್ಲ. ಜನಬೆಂಬಲ ನನ್ನೊಂದಿಗೆ ಇದ್ದು ’ಜನ ರಾಜಕಾರಣ’ ಮಾಡುತ್ತೇನೆ. ಇಲ್ಲಿನ ಪ್ರತಿನಿಧಿಗಳು ವ್ಯಾಪಾರಸ್ಥರನ್ನು ಪ್ರತಿನಿಧಿಸುತ್ತಿದ್ದರೆ ನಾನು ಇಲ್ಲಿನ ಬಡ ಸಮುದಾಯವನ್ನು ಪ್ರತಿನಿಧಿಸುತ್ತಿದ್ದೇನೆ ಎಂದರು.
ಸುರತ್ಕಲ್ ವ್ಯಾಪ್ತಿಯಲ್ಲಿ ಸರಕಾರಿ ಆಸ್ಪತ್ರೆ, ಕಾಲೇಜುಗಳಿಲ್ಲ ಅದಕ್ಕೆ ನನ್ನ ಪ್ರಥಮ ಆದ್ಯತೆ ಹಾಗೂ ಪರಿಸರ ಸ್ನೇಹಿ ಉದ್ಯಮದ ಮೂಲಕ ಇಲ್ಲಿನ ಯುವ ಜನರಿಗೆ ಉದ್ಯೋಗ ಕಲ್ಪಿಸುವುದು ಕೂಡಾ ನನ್ನ ಆಶಯ ಎಂದರು .
ನಾಮಪತ್ರ ಸಲ್ಲಿಸುವ ಸಂದರ್ಭ ಬಿ.ಕೆ. ಇಂಮ್ತಿಯಾಝ್, ಯು.ಬಿ.ಲೋಕಯ್ಯ, ಗಂಗಯ್ಯ ಅಮೀನ್, ಸುನಂದ ಕೊಂಚಾಡಿ ಹಾಗೂ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.