ಕಾರ್ಕಳ, ಏ 18: ಕಾಂಗ್ರೆಸ್ ಪಕ್ಷದಲ್ಲಿ ಸೀಟು ಹಂಚಿಕೆಯಲ್ಲಿ ತಲೆ ತೋರಿರುವ ವಿವಾದಕ್ಕೆ ತೆರೆ ಬೀಳಲು ಸಿದ್ಧಯಾಗುತ್ತಿದ್ದಂತೆ ಮತ್ತೊಂದೆಡೆಯಲ್ಲಿ ಹೊಸ ವಿವಾದವೊಂದು ಹುಟ್ಟಿಕೊಂಡಿದೆ.
ಅಭ್ಯರ್ಥಿ ಅಕಾಂಕ್ಷಿಯಾಗಿರುವ ’ಮುನಿಯಾಲು ಉದಯಕುಮಾರ್ ಶೆಟ್ಟಿ ಬಣದ ಪ್ರಮುಖರು ಬುಧವಾರ ಬೆಳಿಗ್ಗೆ ಮಾಜಿ ಶಾಸಕ ಹೆಚ್.ಗೋಪಾಲ ಭಂಡಾರಿಯವರ ಮನೆಗೆ ನುಗ್ಗಿ ಜೀವಬೆದರಿಕೆ’ ಎಂಬ ಶೀರ್ಷಿಕೆಯಡಿಯಲ್ಲಿ ವಿವಾದಿತ ವಿಚಾರವೊಂದು ವಾಟ್ಸಪ್ನಲ್ಲಿ ಹರಿದಾಡುತ್ತಿರುವುದು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಮತ್ತಷ್ಟು ಗೊಂದಲಕ್ಕೂ ಕಾರಣವಾಗಿದೆ.
ಕಾರ್ಕಳ ಕಾಂಗ್ರೆಸ್ ವೀಕ್ಷಕರಾಗಿರುವ ಭರತ್ ಮುಂಡೋಡಿ ದಿನದ ಹಿಂದೆಯಷ್ಟೇ ಪತ್ರಿಕೆಯೊಂದಿಗೆ ಮಾತನಾಡಿ, ಬಿನ್ನಮತ ಶ್ರಮನಕ್ಕೆ ಎಲ್ಲ ರೀತಿಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ ಎಂಬ ಹೇಳಿಕೆ ನೀಡಿರುವ ಬೆನ್ನಲ್ಲೆ ವಾಟ್ಸ್ಪ್ ಹೊಸ ವಿವಾದ ಕಾಣಿಸಿಕೊಂಡಿರುವುದು ಹಲವಾರು ಅನುಮಾನಗಳಿಗೆ ಎಡೆಮಾಡಿದೆ.
ಈ ಕುರಿತು ಮಾಜಿಶಾಸಕ ಹೆಚ್.ಗೋಪಾಲಭಂಡಾರಿ ಅವರನ್ನು ಪತ್ರಿಕೆ ಮಾತನಾಡಿದಾಗ. ಅಂತಹ ಬೆಳವಣಿಗೆಗಳು ನಡೆಯಲಿಲ್ಲ. ಆದರೆ ಮಾತುಕತೆಗೆ ಬಂದವರಲ್ಲಿ ಮೊನ್ನೆ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಪಕ್ಷದ ಮುಖಂಡ ವೀರಪ್ಪ ಮೊಯಿಲಿ ಅವರ ಪ್ರತಿಕೃತಿ ದಹನಕ್ಕೆ ಪ್ರಯತ್ನಿಸಿರುವುದು, ಅವರ ಹಾಗೂ ನನ್ನ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಫೇಸ್ಬುಕ್ ಹಾಗೂ ವಾಸ್ಟ್ಪ್ನಲ್ಲಿ ಹರಿದಾಡುವಂತೆ ಮಾಡಿ ಶೃದ್ಧಾಂಜಲಿ ಅರ್ಪಿಸಿರುವುದು ಅಮಾನವೀಯ ಎಂಬುವುದನ್ನು ಅವರ ಗಮನಕ್ಕೆ ತಂದಿದ್ದೇನೆ.
ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರಿಗೆ ಸೀಟು ಬಿಟ್ಟು ಕೊಡುವಂತಗೆ ಮನವಿ ಮಾಡಿದ್ದಾರೆ. ಆ ವಿಚಾರ ಪಕ್ಷದ ಹೈಕಮಾಂಡ್ಗೆ ಬಿಟ್ಟದಾಗಿದೆ ಎಂದು ಅವರಲ್ಲಿ ತಿಳಿಸಿದ್ದೇನೆ ಎಂದು ಅವರು ಮಾಜಿ ಶಾಸಕ ಹೆಚ್.ಗೋಪಾಲಭಂಡಾರಿ ತಿಳಿಸಿದ್ದಾರೆ.