ಮಂಗಳೂರು ಸೆ20: ಮೂಡುಬಿದಿರೆ ವಿದ್ಯಾರ್ಥಿನಿ ಕಾವ್ಯ ಅನುನಾಸ್ಪದ ಸಾವಿನ ಕುರಿತಂತೆ ಜೆಸ್ಟೀಸ್ ಫೋರ್ ಕಾವ್ಯ ಸಮಿತಿ ಹಾಗೂ ಕಾವ್ಯಳ ಹೆತ್ತವರು ಇಂದು ಕಮೀಷನರ್ ಕಚೇರಿಯಲ್ಲಿ ಗೃಹ ಸಚಿವ ರಾಮಲಿಂಗಾ ರೆಡ್ಡಿಯನ್ನು ಭೇಟಿ ಮಾಡಿ ಕಾವ್ಯ ಸಾವಿನ ತನಿಖೆಯನ್ನು ಸಿಓಡಿಗೆ ಒಪ್ಪಿಸುವಂತೆ ಅಗ್ರಹಿಸಿ ಮನವಿ ಸಲ್ಲಿಸಿದ್ದಾರೆ. ಆ ಬಳಿಕ ಮಾತನಾಡಿದ ಜೆಸ್ಟೀಸ್ ಫೋರ್ ಕಾವ್ಯ ಸಮಿತಿಯ ನೇತೃತ್ವ ವಹಿಸಿರುವ ದಿನಕರ್ ಶೆಟ್ಟಿ ,’ಸ್ಥಳೀಯ ಪೊಲೀಸರ ಮೇಲೆ ನಮಗೆ ನಂಬಿಕೆ ಇಲ್ಲ, ಪ್ರಕರಣದ ಪ್ರಮುಖ ಆರೋಪಿಯಾಗಿರುವ ದೈಹಿಕ ಶಿಕ್ಷಕ ಪ್ರವೀಣ್ ನನ್ನು ಪೊಲೀಸರು ಈವರೆಗೆ ಸರಿಯಾಗಿ ವಿಚಾರಿಸಿಲ್ಲ, ಇನ್ನೊಂದೆಡೆ ದೈಹಿಕ ಶಿಕ್ಷಕ ಪ್ರವೀಣ್ ಗೂ ಆಳ್ವಾಸ್ ಶಿಕ್ಷಣ ಸಂಸ್ಥೆಗೂ ಯಾವುದೇ ಸಂಬಂದವಿಲ್ಲದಂತೆ ಬಿಂಬಿಸಲಾಗುತ್ತಿದೆ. ಹೆತ್ತವರಿಗೂ ತನಿಖೆ ಪ್ರಗತಿ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ. ಈ ಎಲ್ಲಾ ಕಾರಣಗಳಿಂದ ತನಿಖೆಯನ್ನು ಸಿಓಡಿ ಒಪ್ಪಿಸಲು ಮನವಿ ಸಲ್ಲಿಸಲಾಗಿದೆ’ ಎಂದರು.
ಅರೆಬೆತ್ತಲೆ ಮೆರವಣಿಗೆ
ಮೂಡುಬಿದಿರೆ ವಿದ್ಯಾರ್ಥಿನಿ ಕಾವ್ಯ ಅನುನಾಸ್ಪದ ಸಾವಿನ ಕುರಿತಂತೆ ಜೆಸ್ಟೀಸ್ ಫೋರ್ ಕಾವ್ಯ ಸಮಿತಿ ಹಾಗೂ ಕಾವ್ಯಳ ಹೆತ್ತವರು ಹೋರಾಟದ ಮುಂದಿನ ಹಂತವಾಗಿ ಸೆ ೨೩ರಂದು ವೆನ್ಲಾಕ್ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅರೆಬೆತ್ತಲೆ ಕಾಲ್ನಡಿಗೆ ಜಾಥಾ ಹಮ್ಮಿ ಕೊಳ್ಳಲಾಗಿದೆ ಎಂದು ಜೆಸ್ಟೀಸ್ ಫೋರ್ ಕಾವ್ಯ ಸಮಿತಿಯ ದಿನಕರ್ ಶೆಟ್ಟಿ ತಿಳಿಸಿದ್ದಾರೆ.
ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮಾತನಾಡಿದ ಗೃಹ ಸಚಿವ ರಾಮಲಿಂಗಾ ರೆಡ್ಡಿ ’ ಈ ಕುರಿತು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದೇನೆ, ತನಿಖೆ ಅಂತಿಮ ಹಂತದಲ್ಲಿದೆ. ಶೀಘ್ರದಲ್ಲಿಯೇ ವರದಿ ಬಹಿರಂಗಗೊಳಿಸಿಲಾಗುವುದು ಎಂದರು.