ವಿಶೇಷ ವರದಿ : ಅನುಷ್ ಪಂಡಿತ್
ಬಜ್ಪೆ ಏ 13 : ಇತ್ತೀಚಿನ ದಿನಗಳಲ್ಲಿ ಎಳೆ ಮಕ್ಕಳನ್ನೇ ಬೇಬಿ ಸಿಟ್ಟಿಂಗ್, ನರ್ಸರಿ ಶಾಲೆ ಗಳಿಗೆ ಹಾಕೋದು ಸಾಮಾನ್ಯ ಸಂಗತಿ . ಹೀಗಾಗಿಯೇ ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಕೊರತೆ ಕಾಡುವಂತೆ ಸರ್ಕಾರಿ ಅಂಗನವಾಡಿಗಳು ಕೂಡಾ ಚಿಣ್ಣರ ಕಲರವವಿಲ್ಲದೆ ಬಿಕೋ ಅನ್ನುತ್ತಿದೆ. ಹಳ್ಳಿಗಳ ಅಂಗನವಾಡಿಗಳಲ್ಲಿ ಬೆರಳೆಣಿಕೆಯ ಮಕ್ಕಳು ಇದ್ದರೂ ಕೂಡಾ ನಾಯಿಕೊಡೆಗಳಂತೆ ಕಂಡು ಬರುವ ಕಿಂಡರ್ ಗಾರ್ಡನ್ , ಬೇಬಿ ಸಿಟ್ಟಿಂಗ್ , ನರ್ಸರಿ ಶಾಲೆಗಳಿಂದ ನಗರದ ಅಂಗನವಾಡಿಗಳಲ್ಲಿ ಮಕ್ಕಳಲಿಲ್ಲದೆ ಮುಚ್ಚುವ ಪರಿಸ್ಥಿತಿ ಬಂದೊಂದಗಿದೆ.
ಆದರೆ ಇಲ್ಲೊಂದು ಅಂಗನವಾಡಿಯಿದೆ. ಯಾವ ಖಾಸಗಿ ನರ್ಸರಿ ಶಾಲೆಗಳಿಗಿಂತಲೂ ಕಮ್ಮಿ ಇಲ್ಲ ಅನ್ನುವಂತೆ ಬೆಳೆದು ನಿಂತಿದೆ. ಕಳೆದ 13 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿರುವ ಬಜ್ಪೆ ತಾರೀಕಂಬಳ ಅಂಗನವಾಡಿ ಹೊಸ ಕಟ್ಟಡದೊಂದಿಗೆ ಸುವ್ಯವಸ್ಥಿತವಾಗಿ ಸಜ್ಜುಗೊಂಡು ಮಕ್ಕಳನ್ನು ಆಕರ್ಷಿಸುತ್ತಿದೆ. ಹೊಸ ಮಾದರಿಯ ಅಡುಗೆ ಕೋಣೆ, ಶೌಚಾಲಯ, ನೀರಿನ ವ್ಯವಸ್ಥೆ, ಹುಲ್ಲಿನ ಗಾರ್ಡನ್, ಆಟೋಪಕರಣಗಳು, ಭದ್ರವಾದ ಸುತ್ತಲಿನ ತಡೆಗೋಡೆಯನ್ನು ಒಳಗೊಂಡಿದ್ದು, ಕಿಂಡರ್ ಗಾರ್ಡನ್ ಸ್ಕೂಲ್ ನ ದುಬಾರಿ ಡೋನೆಷನ್ ,ಫೀಸ್ ತೆತ್ತು ಅಲ್ಲಿಗೆ ತಮ್ಮ ಮಕ್ಕಳನ್ನು ಸೇರಿಸುವ ಪೋಷಕರು ಒಮ್ಮೆ ಇತ್ತ ತಿರುಗಿ ನೋಡುವಂತಾಗಿದೆ.
ಇನ್ನು ಇದೆಲ್ಲದರ ರೂವಾರಿ, ಮಾಸ್ಟರ್ ಪ್ಲಾನರ್ ಆಗಿರುವ ಸಿರಾಜ್ ಹೇಳುವಂತೆ ಈ ಹೊಸ ಕಟ್ಟಡ ನನ್ನ ಕನಸು. ಒಂದು ದಿನ ನನ್ನ ಮಗನನ್ನು ಕಿಂಡರ್ ಗಾರ್ಡನ್ ಗೆ ಸೇರಿಸುವಾಗ ಯಾಕೆ ಇಲ್ಲಿ ಶ್ರೀಮಂತರ ಮಕ್ಕಳೇ ಬರುತ್ತಾರೆ ಎಂದು ಚಿಂತಿಸಿದೆ. ನಂತರದ ದಿನಗಳಲ್ಲಿ ಸರಕಾರಕ್ಕೆ ಈ ಯೋಜನೆಯ ಪ್ರಾಜೆಕ್ಟ್ ಅನು ಮೋದಿಸಿದೆ. ಎಂ.ಎಲ್.ಎ, ಎಂ.ಎಲ್.ಸಿ, ಎಂ.ಪಿ, ಕಂಪೆನಿ.ಊರಿನ ನಾಗರರೀಕರ ನೆರವು, ಸ್ಥಳೀಯ ಮಕ್ಕಳ ವಿಭಾಗವು ನೆರವು ನೀಡಿತು.ಇದೀಗ ೩೦ ಲಕ್ಷದ ಬಾಲ ಭವನ ಸಿದ್ದಗೊಂಡಿದೆ.ಇನ್ನೇನು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ವರ್ಗಾಯಿಸುವುದು ಮೊದಲ ಆದ್ಯತೆ.
ಸುಮತಿ ಅಂಗನವಾಡಿ ಕಾರ್ಯಕರ್ತೆ
ಇದೊಂದು ಮಾದರಿ ಅಂಗನವಾಡಿ ಕಟ್ಟಡ ಇಡೀ ರಾಜ್ಯಕ್ಕೆ, ಈಗ ಪೋಷಕರು ಮಕ್ಕಳನ್ನು ಇಲ್ಲಿಗೆ ಸೇರಿಸುತ್ತಿದ್ದಾರೆ.ಮಕ್ಕಳನ್ನು ಪ್ರೈವೇಟ್ ಸ್ಕೂಲ್ಗೆ ಕಳುಹಿಸುತ್ತಿದ್ದವರು ವಿಚಾರಿಸಿ ದಾಖಲಿಸುತ್ತಿದ್ದಾರೆ.ಜನತೆ ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ.