ಕುಂದಾಪುರ ಸೆ20 : ರಟ್ಟಾಡಿಯ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇವಾ ನಿರತ ಕಚೇರಿಗೆ ನುಗ್ಗಿದ ದುಷ್ಕರ್ಮಿಗಳ ತಂಡವೊಂದು ಕ್ಯಾಶಿಯರ್ ಮೇಲೆ ಹಲ್ಲೆ ನಡೆಸಿ,2 ಲಕ್ಷಕ್ಕೂ ಹೆಚ್ಚು ನಗದು ದೋಚಿದ್ದಾರೆ. ಕಚೇರಿಯಲ್ಲಿ ಕ್ಯಾಶಿಯರ್ ಆಗಿರುವ ಪ್ರೀತಿ (24) ಎಂದಿನಂತೆ ತಮ್ಮ ಕಾರ್ಯನಿರ್ವಹಿಸುತ್ತಿರುವಾಗ ಹೆಲ್ಮೆಟ್ ಹಾಕಿಕೊಂಡು ಒಳನುಗ್ಗಿದ ದರೋಡೆಕೋರರು ಸುಮಾರು ಹಲ್ಲೆ ಮಾಡಿ 2.3 ಲಕ್ಷಕ್ಕೂ ಹೆಚ್ಚು ಹಣ ದೋಚಿದ್ದಾರೆ. ರಟ್ಟಾಡಿ ಗ್ರಾಮದ ಎರಡು ಒಕ್ಕೂಟಗಳಿಂದ ಹಣ ಇದಾಗಿದ್ದು ಗಾಯಳು ಪ್ರೀತಿ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ಪೊಲೀಸರು ತನಿಖೆ ಮುಂದುವರಿಸಿದ್ದಾರೆ.