ಬಂಟ್ವಾಳ, ಏ 05 : ನೀತಿ ಸಂಹಿತೆಯ ಬಿಸಿ ಬಂಟ್ವಾಳ ತಾಲೂಕಿನಲ್ಲಿ ನಡೆಯುವ ಅಕ್ರಮಮರಳುಗಾರಿಕೆಗೂ ತಟ್ಟಿದೆ. ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಮೊದಲು ಬಂಟ್ವಾಳ ದಲ್ಲಿ ಎಗ್ಗಿಲ್ಲದೆ ನಡೆಯುತ್ತಿದ್ದ ಅಕ್ರಮ ಮರಳುಗಾರಿಕೆಗೆ ಕೊಂಚ ಮಟ್ಟಿನ ಬ್ರೇಕ್ ಬಿದ್ದಿದೆ. ಬಂಟ್ವಾಳ ಪ್ರೋಬೆಸನರಿ ಅಕ್ಷಯ್ ಖಾಟೆ ಮತ್ತು ಗ್ರಾಮಾಂತರ ಎಸ್ ಐ ಪ್ರಸನ್ನ ಹಾಗೂ ನಗರ ಠಾಣಾ ಎಸ್ ಐ ಚಂದ್ರಶೇಖರ್, ಅಪರಾಧ ವಿಭಾಗದ ಎಸ್ ಐ ಹರೀಶ್ ಮತ್ತು ಸಂಚಾರ ವಿಭಾಗದ ಎಸ್ ಐ ಉಲ್ಲಪ್ಪ ಅವರ ವಿಶೇಷ ತಂಡ ಸದ್ಯದ ಪರಿಸ್ಥಿತಿಯಲ್ಲಿ ಅಕ್ರಮ ಮರಳಿಗೆ ತಡೆಯೊಡ್ಡಿದೆ. ಒಂದೇ ಪರ್ಮಿಷನ್ ನಲ್ಲಿ ದಿನಕ್ಕೆ ನಾಲ್ಕು ಅಥವಾ ಐದು ಲೋಡ್ ಮರಳು ಸಾಗಿಸುತ್ತಿದ್ದ ಲಾರಿಗಗಳ ಸಂಚಾರಕ್ಕೂ ಬ್ರೇಕ್ ಹಾಕಿದ್ದಾರೆ. ಜನಪ್ರತಿನಿಧಿಗಳ ಸಹಾಯ ಹಸ್ತ ಪಡೆದು ಇಲ್ಲಿ ನಿರಂತರವಾಗಿ ದಿನಕ್ಕೆ ಒಂದು ಪರ್ಮಿಟ್ ಮೂಲಕ ಅನೇಕ ಲೋಡ್ ಅಕ್ರಮವಾಗಿ ಸಾಗಿಸುತ್ತಿದ್ದರು. ಪ್ರಸ್ತುತ ಪರಂಗಿಪೇಟೆ ಯಲ್ಲಿ ಬ್ಯಾರಿಕೇಡ್ ಗಳನನ್ನು ಹಾಕಲಾಗಿದ್ದು ಅ ಮೂಲಕ ಎಲ್ಲಾ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ . ಮರಳು ಸಾಗಿಸುವ ಲಾರಿಗಳ ಪರ್ಮಿಟ್ ಗಳನ್ನು ತಪಾಸಣೆ ನಡೆಸಿ ಅದಕ್ಕೆ ಸೀಲ್ ಹಾಕಲಾಗುತ್ತದೆ. ಒಂದು ಪರ್ಮಿಟ್ ನಲ್ಲಿ ಒಂದೇ ಲೋಡ್ ಸಾಗಾಟ ಮಾಡುವಂತೆ ಸೀಲ್ ಹಾಕಲಾಗುತ್ತದೆ. ಒಂದು ವೇಳೆ ಅದನ್ನು ಉಲ್ಲಂಘಿಸಿದರೆ ಕಾನೂನು ಕ್ರಮ ಕೈಗೊಳ್ಳಲು ಅವಕಾಶ ವಿದೆ ಎಂದು ಪೋಲಿಸ್ ರು ತಿಳಿಸಿದ್ದಾರೆ .
ಒಟ್ಟಾರೆಯಾಗಿ ಚುನಾವಣೆ ಡಿಕ್ಲೇರ್ ಅದ ಕೂಡಲೇ ನೀತಿ ಸಂಹಿತೆ ಜಾರಿಯಾದ್ದರಿಂದ ತಾಲೂಕಿಕ ಹಲವು ಅಕ್ರಮಗಳಿಗೆ ತಾತ್ಕಾಲಿಕ ತಡೆ ಸಿಕ್ಕಿದೆ ಎನ್ನಬಹುದು. ಒಟ್ಟಿನಲ್ಲಿ ತಾಲೂಕಿನ ಅಕ್ರಮ ಮರಳು ಸಾಗಾಟಗಾರರಿಗೆ ಕಾನೂನಿನ ಬಿಸಿಯನ್ನು ಪೋಲಿಸರು ತೋರಿಸಿದ್ದರೆ.