ಏ.03: ಪ್ರಧಾನಿ ನರೇಂದ್ರ ಮೋದಿ ವಿರೋಧಿ ಅಲೆ ಎಬ್ಬಿಸಲು ರಾಷ್ಟ್ರದ್ರೋಹಿಗಳೆಲ್ಲ ಕೈಜೋಡಿಸುತ್ತಿದ್ದಾರೆ ಎಂದು ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ ಹೇಳಿದ್ದಾರೆ. "ನೋಟು ನಿಷೇಧ ಮತ್ತು ಜಿಎಸ್ಟಿ ಜಾರಿಯಿಂದಾಗಿ ಕಳ್ಳ ವ್ಯವಹಾರಗಳಿಗೆ, ಕಪ್ಪು ಹಣ ಚಲಾವಣೆಗೆ ಧಕ್ಕೆ ಬಂದುದರಿಂದ ಎಲ್ಲ ಕಳ್ಳರೂ ಒಟ್ಟಾಗಿ ಮೋದಿ ವಿರೋಧಕ್ಕೆ ಸಂಘಟಿತರಾಗುತ್ತಿದ್ದಾರೆ. ಒಂದು ಕಾಲದಲ್ಲಿ ಪರಸ್ಪರ ಮುಖ ನೋಡಿಕೊಳ್ಳದಿದ್ದವರು ಇಂದು ಒಂದೇ ತಟ್ಟೆಯಲ್ಲಿ ಊಟ ಮಾಡುವಷ್ಟು ಆಪ್ತರಾಗಿ ಬಿಟ್ಟಿದ್ದಾರೆ!" ಎಂದು ತಮ್ಮ ಟ್ವೀಟ್ ನಲ್ಲಿ ಹೇಳಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ ವಿದೇಶಿ ಹಸ್ತಕರ ನೆರವಿನಿಂದ ಎಲ್ಲ ರಾಜ್ಯಗಳಲ್ಲೂ ಸಮಾಜವನ್ನು ಒಡೆಯುವ ವ್ಯವಸ್ಥಿತ ಯೋಜನೆಯನ್ನು ಜಾರಿಮಾಡಲು ಕಾಂಗ್ರೆಸ್ ಶ್ರಮಿಸುತ್ತಿದೆ. ಆ ಪಕ್ಷದ ಅನುವಂಶಿಕ ವಾರಸುದಾರರು ವಂಚನೆಯ ಪ್ರಕರಣದಲ್ಲಿ ಜಾಮೀನು ಪಡೆದು ಜನರಿಗೆ ತಿಳುವಳಿಕೆ ಕೊಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ವಿರುದ್ದ ಹಾರಿಹಾಯ್ದಿದ್ದಾರೆ.