ಮೂಡುಬಿದಿರೆ, ಏ 03: ಮೂಡುಮಾರ್ನಾಡು ಗ್ರಾಮದಲ್ಲಿ ಮಹಿಳೆಯೊಬ್ಬರು ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಸೋಮವಾರ ಸಾಯಂಕಾಲ ನಡೆದಿದೆ. ಮೂಡುಮಾರ್ನಾಡು ಮುಲ್ಲಗುಡ್ಡೆ ನಿವಾಸಿ ನಳಿನಿ ಪೂಜಾರ್ತಿ ಮೃತ ಮಹಿಳೆ. ನಳಿನಿ ಅವರು ಸಾಯಂಕಾಲ ಬಾವಿಯಿಂದ ಪಂಪ್ ಮುಖಾಂತರ ತೋಟಕ್ಕೆ ನೀರು ಹಾಯಿಸಲು ಹೋಗಿದ್ದರು. ಈ ಸಂದರ್ಭ ಬಾವಿಯಲ್ಲಿ ನೀರು ನೋಡಲು ಇಣುಕಿದ ಸಂದರ್ಭದಲ್ಲಿ ಕಾಲುಜಾರಿ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಿಧವೆಯಾಗಿದ್ದ ನಳಿನಿ ಅವರಿಗೆ ಇಬ್ಬರು ಹೆಣ್ಣ ಮಕ್ಕಳಿದ್ದಾರೆ.