ಏ, 02: ದೇಶದ ಸಂವಿಧಾನವನ್ನು ಬದಲಾಯಿಸಲು ಹೊರಟಿರುವ ಕೇಂದ್ರ ಸಚಿವ ಅನಂತ ಕುಮಾರ್ ಹೆಗಡೆ , ಮುಂದೊಮ್ಮೆ ಕುರಾನ್ನ್ನು ಬದಲಾಯಿಸಲು ಮುಂದಾದರೂ ಆಶ್ಚರ್ಯಪಡಬೇಕಿಲ್ಲ ಎಂದು ಮಾಜಿ ಸಚಿವ ಪಿ.ಟಿ. ಪರಮೇಶ್ವರ್ ನಾಯ್ಕ ಹೇಳಿದ್ದಾರೆ. ಅವರು ಹೂವಿನಹಡಗಲಿ ಪಟ್ಟಣದ ನಿವಾಸದಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಸಭೆಯಲ್ಲಿ ಮಾತಾನಾಡಿದರು. ಸಚಿವ ಅನಂತ ಕುಮಾರ್ ಹೆಗಡೆ ಕರಾವಳಿಯಲ್ಲಿ ತಮಗೆ ಮುಸ್ಲಿಂ ಮತಗಳೇ ಬೇಡ ಎನ್ನುವ ಅವರು ಒಂದು ವೇಳೆ ಅಪ್ಪಿ ತಪ್ಪಿ ರಾಜ್ಯದಲ್ಲಿ ಬಿಜೆಪಿ ಬಂದರೆ ಮುಸ್ಲಿಂ ಸಮುದಾಯವನ್ನು ದೇಶದಿಂದ ಹೊರಗೆ ಕಳುಹಿಸುತ್ತಾರೋ? ಎಂದು ಪ್ರಶ್ನೆ ಮಾಡಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಮುಸ್ಲಿಂ ಸಮುದಾಯ ಅತ್ರಂತವಾಗುವ ಭಯ ಇದೆ ಎಂದರು. ಇದೇ ವೇಳೆ ಗುಜರಾತ್ ನಲ್ಲಿ ಹುನ್ನಾರ ನಡೆಸಿ ಗೆದ್ದಂತೆ, ಕರ್ನಾಟಕದಲ್ಲಿ ಮೋದಿ, ಶಾ ತಂತ್ರ ನಡೆಯುವುದಿಲ್ಲ. ಕಾಂಗ್ರೆಸ್ ಗೆಲುವು ಖಚಿತ ಎಂದು ಗುಡುಗಿದರು.