ವಿಟ್ಲ, ಏ 1 : ಈಜಾಡಲೆಂದು ಬಾವಿಗೆ ಇಳಿದ ಇಬ್ಬರು ಬಾಲಕರಲ್ಲಿ ಓರ್ವ ನೀರಿನಲ್ಲಿ ಮುಳುಗಿ ಸಾವನಪ್ಪಿದ ಘಟನೆ ವಿಟ್ಲದ ಮುಡ್ನೂರು ಗ್ರಾಮದ ಕುಂಡಡ್ಕ ಪಿಲಿಂಜ ಎಂಬಲ್ಲಿ ಏ 1 ರ ಭಾನುವಾರ ನಡೆದಿದೆ. ಮೃತ ಬಾಲಕನನ್ನು ಪಿಲಿಂಜ ನಿವಾಸಿ, ಪುಣಚ ಶಾಲೆಯ 8 ತರಗತಿ ವಿದ್ಯಾರ್ಥಿ ದಕ್ಷಣ್ ಎಂದು ಗುರುತಿಸಲಾಗಿದೆ.
ಘಟನೆಯ ವಿವರ:
ಶಾಲೆಗೆ ರಜೆ ಇರುವ ಕಾರಣ ಭಾನುವಾರದಂದು ಮೂವರು ಬಾಲಕರು ಜತೆಯಾಗಿ ಆಟ ಆಡಲೆಂದು ಬಾವಿ ಬಳಿ ತೆರಳಿದ್ದು, ಬಳಿಕ ನೀರಾಟವಾಡುವ ಮನಸ್ಸಾಗಿ ಇಬ್ಬರು ಬಾಲಕರು ಬಾವಿಗೆ ಇಳಿದಿದ್ದರು. ಆದರೆ ನೀರಾಟವಾಡುವ ಸಂದರ್ಭ ವಿದ್ಯಾರ್ಥಿ ದಕ್ಷಣ್ ಮುಳುಗಲಾರಂಭಿಸಿದ್ದಾರೆ . ಇದನ್ನು ಗಮನಿಸಿದ ಆತನ ಸ್ನೇಹಿತರು ಸಹಾಯಕ್ಕಾಗಿ ಕಿರುಚಲಾರಂಭಿಸಿದ್ದಾರೆ. ತಕ್ಷಣ ಸಹಾಯಕ್ಕೆ ಧಾವಿಸಿದ ಸ್ಥಳೀಯರು ಕಾರ್ಯಾಚರಣೆ ನಡೆಸಿದ್ದಾರೆ. ಆದರೆ ಬಾಲಕ ದಕ್ಷಣ್ ಅದಾಗಲೇ ಸಾವನಪ್ಪಿದ್ದು, ಮತ್ತೊರ್ವನನ್ನು ರಕ್ಷಿಸಿದ್ದಾರೆ. ಸ್ಥಳಕ್ಕೆ ವಿಟ್ಲ ಪೊಲೀಸರು ಬೇಟಿ ಪರಿಶೀಲನೆ ನಡೆಸಿದ್ದಾರೆ.