ಮಂಗಳೂರು, ಮಾ 30: ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕ ವಿಕ್ರಂ ಹೆಗ್ಡೆಯವರನ್ನು ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.
ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕರಾಗಿರುವ ಮಹೇಶ್ ಮೂಡುಬಿದಿರೆ ನಿವಾಸಿ. ಇವರು ಜೈನ ಮುನಿ ಮೇಲೆ ಹಲ್ಲೆ ನಡೆದಿದೆ ಎಂಬ ಸುಳ್ಳು ಸುದ್ದಿಯನ್ನು ತಮ್ಮ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದರು. ಆದರೆ ಜೈನ ಮುನಿ ನಂಜನಗೂಡಿನಲ್ಲಿ ಅಪಘಾತದಿಂದ ಗಾಯಗೊಂಡಿದ್ದು ಅವರ ಮೇಲೆ ಯಾವುದೇ ರೀತಿಯ ಹಲ್ಲೆ ನಡೆದಿರಲಿಲ್ಲ. ಈ ಬಗ್ಗೆ ಗಪ್ಪಾರ್ ಬೇಗ್ ಎಂಬುವವರು ಕ್ರೈಂ ಸೆಲ್ ಗೆ ದೂರು ದಾಖಲಿಸಿದ್ದರು.
ಸುಳ್ಳು ಸುದ್ದಿ ಪ್ರಕಟಿಸಿದ ಆರೋಪದ ಮೇಲೆ ಪೋಸ್ಟ್ ಕಾರ್ಡ್ ಡಾಟ್ ಕಾಂ ಮಾಲೀಕ ವಿಕ್ರಂ ಹೆಗ್ಡೆಯನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.