ಮಂಗಳೂರು ಸೆ19: ನಾಳೆಯಿಂದ ಪಂಪವೆಲ್ ನ ನಾಗುರಿಯಲ್ಲಿ ಹೊಸ " ಸಂಚಾರ ದಕ್ಷಿಣ ಪೊಲೀಸ್ ಠಾಣೆ" ಕಾರ್ಯಾರಂಭಗೊಳ್ಳಲಿದೆ. ನೂತನವಾಗಿ ಪ್ರಾರಂಭವಾಗಲಿರುವ ಠಾಣೆಯನ್ನು ಗೃಹ ಸಚಿವ ಆರ್ ರಾಮಲಿಂಗಾ ರೆಡ್ಡಿ ನಾಳೆ10.30ಕ್ಕೆ ಉದ್ಘಾಟಿಸಲಿದ್ದಾರೆ. ಸದ್ಯ ಹೊಸ ಠಾಣೆಯೂ ಪಂಪ್ ವೆಲ್ ಮಹಾವೀರ ವೄತ್ತ ದ ಬಳಿ ಇರುವ ತಾತ್ಕಾಲಿಕ ಖಾಸಗಿ ಕಟ್ಟಡದಲ್ಲಿ ಕಾರ್ಯರಂಭಗೊಳ್ಳಲಿದೆ. ಕಂಕನಾಡಿ ನಗರ, ಮಂಗಳೂರು ಗ್ರಾಮಾಂತರ, ಉಳ್ಳಾಲ ಮತ್ತು ಕೋಣಾಜೆ ಪೊಲೀಸ್ ಠಾಣಾ ವ್ಯಾಪ್ತಿಯ ರಸ್ತೆ ಅಪಘಾತ ಪ್ರಕರಣಗಳು ಇನ್ನು ಈ ಠಾಣಾಗೆ ಒಳಪಡಲಿದೆ. ಇನ್ನು ಉದ್ಘಾಟನಾ ಸಮಾರಂಭದಲ್ಲಿ ಜೆ,ಆರ್ ಲೋಬೋ, ಸಚಿವ ರಮಾನಾಥ ರೈ, ಯು ಟಿ ಖಾದರ್, ಸಂಸದ ನಳೀನ್ ಕುಮಾರ್ ಕಟೀಲು ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ.