ಉಡುಪಿ, ಮಾ 28: ಸಚಿವ ಪ್ರಮೋದ್ ಮಧ್ವರಾಜ್ ಅವರ ಪ್ರಚಾರ ವಾಹನವನ್ನು ಚುನಾವಣಾ ಆಯೋಗ ಜಪ್ತಿ ಮಾಡಿದೆ. ಪರವಾನಿಗೆ ಪಡೆಯದೆ ವಾಹನವನ್ನು ಉಪಯೋಗಿಸಿದ ಹಿನ್ನಲೆಯಲ್ಲಿ ಉಡುಪಿ ಪ್ರವಾಸಿ ಬಂಗಲೆ ಆವರಣದಿಂದ ಚುನಾವಣಾ ಆಯೋಗದ ಅಧಿಕಾರಿಗಳು ಪ್ರಮೋದ್ ಅವರ ಪ್ರಚಾರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡಿದ್ದ ವಾಹನದಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಈ ಹಿಂದೆ ಇರಲಿಲ್ಲ. ಆದರೆ ಒಂದಷ್ಟು ಗೊಂದಲಕ್ಕೆ ತೆರೆ ಎಳೆಯುವ ನಿಟ್ಟಿನಲ್ಲಿ ಎರಡು ದಿನಗಳ ಹಿಂದೆಯಷ್ಟೇ ಸಚಿವ ಪ್ರಮೋದ್ ತನ್ನ ಪ್ರಚಾರ ವಾಹನಕ್ಕೆ ಕಾಂಗೆಸ್ ಪಕ್ಷದ ಚಿಹ್ನೆಯನ್ನು ಅಳವಡಿಸಿದ್ರು. ಇದೀಗ ಪರವಾನಗಿ ಪಡೆಯದೆ ವಾಹನವನ್ನು ಚುನಾವಣಾ ಪ್ರಚಾರಕ್ಕೆ ಬಳಸಿಕೊಂಡ ಹಿನ್ನಲೆಯಲ್ಲಿ ಪ್ರೊಬೇಷನರಿ ಐಎಎಸ್ ಅಧಿಕಾರಿ ಪೂವಿತಾ ವಾಹನವನ್ನು ಜಪ್ತಿ ಮಾಡಿದ್ದಾರೆ.
ಕೆಲವು ದಿನಗಳ ಹಿಂದೆ ಭಾರಿ ವಿವಾದಕ್ಕೀಡಾಗಿದ್ದ ಪ್ರಮೋದ್ ಮಧ್ವರಾಜ್ ಅವರ ಪ್ರಚಾರ ವಾಹನ ಇದಾಗಿದ್ದು, ಈ ಮೊದಲು ವಾಹನದಲ್ಲಿ ಪಕ್ಷದ ಚಿಹ್ನೆ ಬಳಸದೇ ಇದ್ದದರಿಂದ ಕಾಂಗ್ರೇಸ್ ಮುಖಂಡರ ಕೆಂಗಣ್ಣಿಗೆ ಗುರಿಯಾಗಿತ್ತು, ನಂತರ ಎರಡು ದಿನಗಳ ಹಿಂದೆಯಷ್ಟೇ ವಾಹನದಲ್ಲಿ ಕಾಂಗ್ರೇಸ್ ಪಕ್ಷದ ಕೈ ಚಿಹ್ನೆಯನ್ನು ಹಾಕಿಸಿದ್ದರು. ಈಗ ಚುನಾವಣಾ ಆಯೋಗ ವಾಹನವನ್ನು ಸೀಜ್ ಮಾಡಿ ಮತ್ತೊಮ್ಮೆ ಸುದ್ದಿಯಾಗಿದೆ.