ಮಾ, 26 : ಕೇಂದ್ರ ಸರಕಾರವೂ ಅಡಿಕೆ ಬೆಳೆಗಾರರ ಪರವಾಗಿಯೇ ಇರಲಿದೆ,ಅಡಿಕೆಯನ್ನು ಹಾನಿಕಾರಕ ಪಟ್ಟಿಯಿಂದ ಕೈಬಿಡಲು ಸರ್ಕಾರ ನಿರ್ದಾರ ಕೈಗೊಳ್ಳಲಿದೆ ಎಂದು ಅಮಿತ್ ಶಾ ಆಶ್ವಾಸನೆ ನೀಡಿದರು. ಮಾ.26ರ ಸೋಮವಾರ ತೀರ್ಥಹಳ್ಳಿಯಲ್ಲಿ ನಡೆದ ಅಡಿಕೆ ಬೆಳೆಗಾರರ ಸಮಾವೇಶ ಉದ್ಘಾಟಿಸಿದ ಮಾತಾನಾಡಿದ ಅವರು ಗುಟ್ಕಾ ಮತ್ತು ಅಡಿಕೆಯ ವ್ಯತ್ಯಾಸ ತಿಳಿಯದೇ ಅಗಿನ ಪಿ.ವಿ ನರಸಿಂಹ ರಾಮ್ ಸರಕಾರ ಹಾನಿಕಾರಕ ಪಟ್ಟಿಯಲ್ಲಿ ಅಡಿಕೆಯನ್ನು ಸೇರಿಸಿತು. ಅದರೆ ಈಗಿನ ಕೇಂದ್ರ ಸರ್ಕಾರ ಇದನ್ನು ಕೈಬಿಡಲಿದೆ ಎಂದು ಅಡಿಕೆ ಬೆಳೆಗಾರರಿಗೆ ಭರವಸೆ ನೀಡಿದರು.
ಅಡಿಕೆಯಲ್ಲಿ ವಿಷಕಾರಕ ಅಂಶಗಳು ಇಲ್ಲವೆಂಬುದನ್ನು ತಜ್ಞರ ಮೂಲಕ ನ್ಯಾಯಾಲಯದಲ್ಲಿಯೇ ದೃಢಪಡಿಸಿ, ರೈತರ ಹಿತ ಕಾಪಾಡಲಾಗುವುದು. ಮೋದಿ ಸರ್ಕಾರ ಬಂದ ಮೇಲೆ ನಂತರ ಬಿಳಿ ಅಡಕೆ ಮತ್ತು ಕೆಂಪು ಅಡಿಕೆಗಳ ಬೆಲೆ ಹೆಚ್ಚಿಸಲಾಗಿದೆ. ಇದರಿಂದ ಬೆಳೆಗಾರರಿಗೆ ಸಹಾಯವಾಗಿದೆ,ಒಟ್ಟು 40 ಸಾವಿರ ಮೆಟ್ರಿಕ್ ಟನ್ ಅಡಿಕೆ ಖರೀದಿ ಮಾಡಿದೆ ಎಂದರು.
ಯಡಿಯೂಪ್ಪ ಸರಕಾರ ಬಂದ ನಂತರ ಶಿವಮೊಗ್ಗದಲ್ಲಿ 500 ಕೋಟಿ ವೆಚ್ಚದಲ್ಲಿ ಅಡಿಕೆ ಸಂಶೋಧನ ಕೇಂದ್ರ ಸ್ಥಾಪಿಸಲಾಗುವುದು. ಆ ಮೂಲಕ ಸಂಪೂರ್ಣ ಅಡಿಕೆ ಬೆಳೆಗಾರರ ಹಿತರಕ್ಷಣೆ ಮಾಡಲಾಗುವುದು ಎಂದು ಭರವಸೆ ನೀಡಿದರು.