ಚಿಕ್ಕಬಳ್ಳಾಪುರ, ಮಾ 27: ಮೇ 12 ರಂದು ಚುನಾವಣಾ ದಿನಾಂಕ ಪ್ರಕಟವಾದ ಹಾಗೂ ಚುನಾವಣಾ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಉದ್ಘಾಟಿಸಬೇಕಿದ್ದ ಮುಖ್ಯಮಂತ್ರಿ ಸಿದ್ಧರಾಮಯ್ಯ ಮೆಗಾ ಡೈರಿ ಉದ್ಘಾಟಿಸದೆ ಹಿಂತಿರುಗಿದ ಘಟನೆ ನಡೆದಿದೆ. ಚಿಕ್ಕಬಳ್ಳಾಪುರ ಜಿಲ್ಲೆಯ ನಂದಿ ಕ್ರಾಸ್ ಸಮೀಪದ ಮೆಗಾ ಡೈರಿ ಉದ್ಘಾಟನೆಗೆಂದು ತೆರಳಿದ್ದ ಸಿದ್ದರಾಮಯ್ಯ, ಡೈರಿಯನ್ನು ಉದ್ಘಾಟಿಸದೆ, ಕೇವಲ ವೀಕ್ಷಿಸಿ ಹಿಂದಿರುಗಿದರು. ಅಲ್ಲದೇ ಸರ್ಕಾರಿ ಕಾರು ಬಳಕೆ ಬಿಟ್ಟು ಖಾಸಗಿ ಕಾರು ಹತ್ತಿ ವಾಪಾಸ್ಸದರು.