ಮಾ, 25: ಪ್ರಧಾನಿ ಮೋದಿ ಅವರು ಭಾಷಣದ ಸಂದರ್ಭದಲ್ಲಿ ಮಾಡಿದ ಹಲವು ಯಡವಟ್ಟುಗಳನ್ನು ಕ್ರೋಡಿಕರಿಸಿ ವಿಡಿಯೋ ತುಣುಕು ಪೋಸ್ಟ್ ಮಾಡಿರುವ ರಮ್ಯಾ, ಮೋದಿ ಅವರಿಗೆ 'ಪ್ರಮಾದಗಳ ರಾಜ' ಎಂದು ಬಿರುದು ನೀಡಿದ್ದಾರೆ. ಮೋದಿ ಅವರಿಗೆ ವಿಶ್ವಸುಂದರಿ ಕಿರೀಟ ತೊಡಿಸಿ ವ್ಯಂಗ್ಯವಾಡಿದ್ದಾರೆ. ಈ ಹಿಂದೆ ಹಲವು ಬಾರಿ ಎಐಸಿಸಿ ಸಾಮಾಜಿಕ ಜಾಲತಾಣದ ಉಸ್ತುವಾರಿ ಹಾಗೂ ಮಾಜಿ ಸಂಸದೆ ರಮ್ಯಾ ಪ್ರಧಾನಿ ಮೋದಿ ಬಗ್ಗೆ ಲೇವಡಿ ಮಾಡಿದ್ದು, ಇದೀಗ ಮತ್ತೆ ಮುಂದುವರಿಸಿದ್ದಾರೆ.''ನಾವೆಲ್ಲರೂ ತಪ್ಪು ಮಾಡುತ್ತೇವೆ, ಪ್ರಧಾನಿಯೂ ತಪ್ಪು ಮಾಡುತ್ತಾರೆ,'' ಎಂದು ಈ ಪೋಸ್ಟ್ಗೆ ಶೀರ್ಷಿಕೆ ನೀಡಿದ್ದಾರೆ.