ಕಾಸರಗೋಡು, ಮಾ 25 : ಪೋಷಕರ ಜೊತೆ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಚೂಡಿದಾರ್ ದುಪ್ಪಟ್ಟಾ ಬೈಕ್ ನ ಚಕ್ರಕ್ಕೆ ಸಿಲುಕಿ ರಸ್ತೆಗೆಸೆಲ್ಪಟ್ಟು12 ವರ್ಷದ ಬಾಲಕಿ ಮೃತಪಟ್ಟ ಘಟನೆ ಮಾ. 25 ರ ಭಾನುವಾರ ಕಿನಾನೂರು - ಕರಿಂದಲ ದಲ್ಲಿ ನಡೆದಿದೆ. ಬೀರಿಕುಳಂ ಪೆರಿಯಂಗೋನತ್ ನ ಸಜಿ - ಬಿಂದು ದಂಪತಿ ಪುತ್ರಿ ಮರಿಯ ( 12) ಮೃತಪಟ್ಟವಳು.ಪಾಮ್ ಸಂಡೆ ಅಂಗವಾಗಿ ಬೆಳಿಗ್ಗೆ ತಂದೆ-ತಾಯಿ ಜೊತೆ ಬೀರಿಕುಳಂ ಚರ್ಚ್ ಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.
ಮರಿಯ ಬೈಕ್ ನಲ್ಲಿ ತಂದೆ -ತಾಯಿ ಮಧ್ಯೆ ಕುಳಿತಿದ್ದು, ದುಪ್ಪಟ್ಟ ಚಕ್ರಕ್ಕೆ ಸಿಲುಕಿ ಈಕೆ ರಸ್ತೆಗೆಸೆಯಲ್ಪಟ್ಟಿದ್ದಾಳೆ. ತಕ್ಷಣ ಇವರನ್ನು ಕಾಞ೦ಗಾಡ್ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ತಲೆಗೆ ಗಂಭೀರ ಸ್ವರೂಪದ ಗಾಯವಾದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟರು. ಈಕೆ ಪರಪ್ಪ ಸರಕಾರಿ ಹಯರ್ ಸೆಕಂಡರಿ ಶಾಲಾ ಏಳನೇ ತರಗತಿ ವಿದ್ಯಾರ್ಥಿನಿಯಾಗಿದ್ದಳು. ನೀಲೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.