ನಮ್ಮ ಬೆಂಗಳೂರು ಫೌಂಡೇಶನ್ ನೀಡುವ 'ನಮ್ಮ ಬೆಂಗಳೂರು ಪ್ರಶಸ್ತಿ' ಯನ್ನು ಐಪಿಎಸ್ ಅಧಿಕಾರಿ ಡಿ ರೂಪಾ ಮೌದ್ಗಿಲ್ ಅವರು ನಿರಾಕರಿಸಿದ್ದಾರೆಂದು ತಿಳಿದುಬಂದಿದೆ. ಅವರಿಗೆ ಪ್ರಶಸ್ತಿ ಘೋಷಣೆ ಮಾಡಿದ ಸಂಬಂಧ ನಮ್ಮ ಬೆಂಗಳೂರು ಫೌಂಡೇಶನ್'ಗೆ ಪತ್ರ ಬರೆದಿರುವ ರೂಪಾ ಅವರು, ಪ್ರಶಸ್ತಿಗೆ ನನ್ನನ್ನು ಪರಿಗಣಿಸಿದ್ದೀರಿ ಎಂದು ಸಂತೋಷವಾಯಿತು. ಅದಕ್ಕಾಗಿ ಧನ್ಯವಾದ. ಆದರೆ ಪ್ರಶಸ್ತಿಯೂ ಭಾರೀ ಮೊತ್ತದ ನಗದು ಪುರಸ್ಕಾರವನ್ನು ಒಳಗೊಂಡಿದ್ದರಿಂದ ಅದನ್ನು ಸ್ವೀಕರಿಸಲು ನನ್ನ ಮನಸ್ಸು ಒಪ್ಪುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
ಸರ್ಕಾರಿ ನೌಕರರು ರಾಜಕೀಯಕ್ಕೆ ನಂಟು ಹೊಂದಿರುವ ಸಂಘಟನೆಗಳಿಂದ ಅಂತರ ಕಾಯ್ದುಗೊಳ್ಳಬೇಕೆಂಬ ನಿಯಮವಿದೆ. ಅದರಂತೆ ನಡೆದುಕೊಂಡರೆ ಮಾತ್ರ ,ಮಾತ್ರ ಪರಿಶುದ್ದರಾಗಿರಲು ಸಾಧ್ಯ . ಚುನಾವಣೆ ಬೇರೆ ಹತ್ತಿರವಿರೋದ್ರಿಂದ ಇವೆಲ್ಲವೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ. ನಿಮ್ಮ ಸಾಮಾಜಿಕ ಕಳಕಳಿ ಕಾರ್ಯಕ್ರಮಕ್ಕೆ ನನ್ನ ಬೆಂಬಲವಿದೆ. ಆದರೆ ಪ್ರಶಸ್ತಿ ಸ್ವೀಕರಿಸದಿರುವುದಕ್ಕೆ ದಯವಿಟ್ಟು ಕ್ಷಮಿಸಿ ಎಂದು ರೂಪಾ ಅವರು ಪತ್ರದಲ್ಲಿ ತಿಳಿಸಿದ್ದಾರೆ.