ಮಂಗಳೂರು, ಮಾ 25: ನಗರ ಹೊರವಲಯದಲ್ಲಿರುವ ತಣ್ಣಿರು ಬಾವಿ ಬೀಚ್ನಲ್ಲಿ ಹುಟ್ಟುಹಬ್ಬದ ಪಾರ್ಟಿ ಮಾಡುತ್ತಿದ್ದ ವಿದ್ಯಾರ್ಥಿಗಳ ಗುಂಪಿನ ಮೇಲೆ ತಂಡವೊಂದು ಹಲ್ಲೆ ನಡೆಸಿದ್ದು, ಘಟನೆ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾ. 24 ರ ಶನಿವಾರ ತಣ್ಣೀರುಬಾವಿಯ ಫಾತಿಮಾ ಚರ್ಚ್ ಬಳಿ ಇಬ್ಬರು ವಿದ್ಯಾರ್ಥಿನಿಯರ ಜೊತೆಗಿದ್ದ ಸಾಬಿತ್, ಸಮೀರ್ ಮತ್ತು ನಿತೇಶ್ ಎಂಬ ಮೂವರು ಹುಡುಗರು ಬರ್ತ್ ಡೇ ಪಾರ್ಟಿ ಆಚರಿಸುತ್ತಿದ್ದರು. ಆ ಸಂದರ್ಭ ತಮ್ಮೊಂದಿಗಿದ್ದ ವಿದ್ಯಾರ್ಥಿನಿಯರೊಂದಿಗೆ ಮೂವರು ವಿದ್ಯಾರ್ಥಿಗಳು ಅಸಭ್ಯವಾಗಿ ವರ್ತಿಸುತ್ತಿದ್ದರು ಎನ್ನಲಾಗಿದ್ದು, ಇದನ್ನು ಕಂಡ ಯುವಕರ ತಂಡವೊಂದು ವಿದ್ಯಾರ್ಥಿಗಳನ್ನು ವಿಚಾರಿಸಿ, ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಹಲ್ಲೆಗೊಳಗಾದ ವಿದ್ಯಾರ್ಥಿಗಳಿಬ್ಬರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.