ಹೊಸದಿಲ್ಲಿ, ಮಾ 23: ಕಳೆದು ಹೋಗಿದ್ದ ಪ್ರಧಾನಿ ಮೋದಿಯ ಮಾರ್ಕ್ಸ್ ಕಾರ್ಡ್ ನನಗೆ ಸಿಕ್ಕಿದೆ ನಟಿ ರಮ್ಯಾ ಟ್ವೀಟ್ ಮಾಡಿದ್ದು, ಈ ಟ್ವೀಟ್ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.
ರಮ್ಯಾ ರಿಪೋರ್ಟ್ ಕಾರ್ಡ್ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಅಶೋಕ ಚಕ್ರದ ಚಿಹ್ನೆಯನ್ನು ಬಳಸಿ ಕೇಸರಿ ಬಣ್ಣದ ಕಾರ್ಡ್ ಪೋಸ್ಟ್ ಮಾಡಿದ್ದಾರೆ. ಈ ರಿಪೋರ್ಟ್ ಕಾರ್ಡ್ ನಲ್ಲಿ ಪ್ರಧಾನಿ ಮೋದಿಯವರಿಗೆ ಉದ್ಯೋಗದಲ್ಲಿ ಡಿ ಗ್ರೇಡ್, ರಕ್ಷಣೆಯಲ್ಲಿ ಸಿ ಗ್ರೇಡ್, ಆರೋಗ್ಯ ಕ್ಷೇತ್ರದಲ್ಲಿ ಎಫ್ ಗ್ರೇಡ್, ಆರ್ಥಿಕತೆಯಲ್ಲಿ ಎಫ್ ಗ್ರೇಡ್, ಮಹಿಳಾ ಸುರಕ್ಷತೆಯಲ್ಲಿ ಸಿ ಗ್ರೇಡ್. ಕಥೆ ಹೇಳುವುದರಲ್ಲಿ ಎ ++ ಗ್ರೇಡ್ ನೀಡಲಾಗಿದೆ.
ಇಷ್ಟೇ ಅಲ್ಲ, ಪ್ರಧಾನಿ ಮೋದಿ ಸುಳ್ಳು ಕಥೆಗಳನ್ನು ಹೇಳುವುದಲ್ಲಿ ಉತ್ತಮ ಹಿಡಿತ ಹೊಂದಿದ್ದಾನೆ. ವಿದ್ಯಾರ್ಥಿ ಜನರೊಂದಿಗೆ ಭೀಕರವಾಗಿ ವರ್ತಿಸುತ್ತಾನೆ. ಜನರೊಂದಿಗೆ ದ್ವೇಷ ಹರಡುತ್ತಾನೆ, ಅಸಮರ್ಥ ಎಂದು ಬರೆಯಲಾಗಿದೆ.
ಇದೀಗ ರಮ್ಯಾ ಮಾಡಿರುವ ಟ್ವೀಟ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಗಲಭೆಗೆ ಕಾರಣವಾಗುತ್ತಿದೆ.