ಉಪ್ಪಿನಂಗಡಿ, ಮಾ 23: 14 ವರ್ಷಗಳ ಹಿಂದೆ ನಡೆದಿದ್ದ ಸಾಮೂಹಿಕ ಅತ್ಯಾಚಾರ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಬಂಧಿಸಿದ್ದಾರೆ.
ಉಪ್ಪಿನಂಗಡಿಯ ನೆಕ್ಕಿಲಾಡಿ ನಿವಾಸಿ ಹಿತೇಶ್ ಗೌಡ ಬಂಧಿತ ಆರೋಪಿ. ಗ್ರಾಮ ಪಂಚಾಯತ್ ಸದಸ್ಯೆ ಮೇಲೆ ಹಿತೇಶ್ ಗೌಡ ಮತ್ತು ಗಿರೀಶ್ ಸೇರಿ ಆಕೆಯ ಪತಿ ಮತ್ತು ಮಕ್ಕಳ ಎದುರೇ ಅತ್ಯಾಚಾರ ನಡೆಸಿದ್ದರು. 2004 ರಲ್ಲಿ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದಲ್ಲಿ ಈ ಅತ್ಯಾಚಾರ ನಡೆದಿದ್ದು, ಘಟನೆ ನಡೆದ ದಿನದಿಂದ ಆರೋಪಿ ಪರಾರಿಯಾಗಿದ್ದನು.
ಘಟನೆ ನಡೆದ ದಿನದಿಂದ ಗ್ರಾಮವನ್ನು ತೊರೆದಿದ್ದ ಹಿತೇಶ್ ಗೌಡ, ಕುಟುಂಬಸ್ಥರ ಜೊತೆಗೆ ಸಂಪರ್ಕದಲ್ಲಿರಲಿಲ್ಲ. ಆತ ಸಿಗದಿದ್ದ ಹಿನ್ನೆಲೆಯಲ್ಲಿ ಆತನ ಎಲ್ಲ ಸಂಬಂಧಿಕರು ಕೂಡ ಊರು ತೊರೆದಿದ್ದರು.
ಇದೀಗ 13 ವರ್ಷಗಳ ನಂತರ ಆರೋಪಿ ಬಂಧಿತನಾಗಿದ್ದಾನೆ ಎಂದು ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನಂದ ಕುಮಾರ್ ಹೇಳಿದ್ದಾರೆ. ಮತ್ತೊಬ್ಬ ಆರೋಪಿ ಗಿರೀಶ್ ಪತ್ತೆಗಾಗಿಯೂ ಕೂಡ ಪೊಲೀಸರು ಬಲೆ ಬೀಸಿದ್ದಾರೆ.