ಸುರತ್ಕಲ್, ಮಾ 23: ಇಲ್ಲಿನ ಲಯನ್ಸ್ ಕ್ಲಬ್ ವಿಶೇಷ ಸಾಮರ್ಥ್ಯದ ಮಕ್ಕಳ ಶಾಲೆಯ ವಿದ್ಯಾರ್ಥಿಗಳಿಗೆ ಸುರತ್ಕಲ್ ಮಹಿಳಾ ಕಾಂಗ್ರೆಸ್ ಆಶ್ರಯದಲ್ಲಿ ಹಣ್ಣು ಹಂಪಲು ಹಾಗೂ ಸಿಹಿ ತಿಂಡಿ ವಿತರಿಸಲಾಯಿತು.
ಈ ಸಂದರ್ಭ ಶಾಸಕ ಮೊಯ್ದೀನ್ ಬಾವಾ ಮಾತನಾಡಿ, ಮಕ್ಕಳ ಸೇವೆ ಮಾಡುವುದು ದೇವರ ಸೇವೆ ಮಾಡಿದಂತೆ. ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ನಾವು ಮಕ್ಕಳ ಸೇವೆಯಲ್ಲಿ ತೊಡಗಿಕೊಂಡಾಗ ಆತ್ಮ ಸಂತೃಪ್ತಿಯ ಜತೆಗೆ ಇತರರಿಗೆ ಮಾದರಿ ನಡೆಯನ್ನು ತೋರಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ಮಹಿಳಾ ಕಾಂಗ್ರೆಸ್ ಶಕುಂತಳಾ ಶೆಟ್ಟಿ ನೇತೃತ್ವದಲ್ಲಿ ರಾಜಕೀಯ ಜತೆ ಸಮಾಜಮುಖಿ ಸೇವೆಯು ಜತೆಯಾಗಿ ಜರಗುತ್ತಿರುವುದು ಶ್ಲಾಘನೀಯ ಎಂದರು.
ನನಗೆ ಮಕ್ಕಳು ಎಂದರೆ ಅತೀವ ಪ್ರೀತಿ. ಅದರಲ್ಲೂ ವಿಶೇಷ ಸಾಮರ್ಥ್ಯದ ಮಕ್ಕಳು ಎಂದರೆ ಎಲ್ಲಿಲ್ಲದ ಪ್ರೀತಿ. ಇರುವುದನ್ನು ಹಂಚಿ ತಿನ್ನುವುದು ಮತ್ತು ಯೋಗ್ಯರ ಸೇವೆ ಮಾಡಿದಾಗ ನಮಗೊಂದು ತೃಪ್ತಿ ಸಿಗುತ್ತದೆ. ಆತ್ಮತೃಪ್ತಿ ಸಿಗುವ ಕೆಲಸ ಮಾಡುವುದರಿಂದ ಮನಸ್ಸಿಗೂ ನೆಮ್ಮದಿ ಸಿಗುತ್ತದೆ. ಇಂತಹ ಕೆಲಸಗಳಲ್ಲಿ ಇದೂ ಒಂದು ಎಂದು ಹೇಳಿದರು.
ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಕುಂತಳಾ ಕಾಮತ್, ಕಾರ್ಮಿಕ ಘಟಕದ ಅಧ್ಯಕ್ಷ ಆನಂದ ಅಮೀನ್, ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಳಾಯಿ ಹಾಗೂ ಮಹಿಳಾ ಕಾಂಗ್ರೆಸ್ ಸುಶೀಲ ಶೆಟ್ಟಿ, ಸೇವಂತಿ ಪುತ್ರನ್, ಫಿಲೋಮಿನಾ, ಅರ್ಚನಾ, ಶಾಂತಾ ರಾವ್, ಇಂದಿರಾ, ಜಮೀಲಾ, ರಝಿಯಾ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.