ಉಡುಪಿ, ಮಾ 22: ಬ್ಯಾಂಕ್ಗೆ ಸಾಲದ ರೂಪದಲ್ಲಿ 193 ಕೋಟಿ ವಂಚಿಸಿದ್ದಾರೆ ಎಂದು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡಿರುವ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂಗೆ 3 ದಿನಗಳ ಒಳಗೆ ಉತ್ತರ ನೀಡುವಂತೆ ಶೋಕಾಸ್ ನೊಟೀಸ್ ನೀಡಿದ್ದು, ಉತ್ತರ ನೀಡದೆ ಹೋದಲ್ಲಿ 10 ಕೋಟಿ ರೂಪಾಯಿ ಮಾನ ನಷ್ಟ ಮೊಕದ್ದಮೆ ದಾಖಲಿಸುತ್ತೇನೆ ಎಂದು ಸಚಿವ ಪ್ರಮೋದ್ ತಿಳಿಸಿದರು. ಉಡುಪಿಯಲ್ಲಿ ಗುರುವಾರ ಇಂದಿರಾ ಕ್ಯಾಂಟೀನ್ ಉದ್ಘಾಟನೆ ಮಾಡಿದ ಬಳಿಕ ಸುದ್ದಿಗಾರರ ಪ್ರಶ್ನೆಗಳಿಗೆ ಉತ್ತರ ನೀಡಿ ಮಾತನಾಡಿದ ಅವರು , ನಾನು ಕಷ್ಟ ಪಟು ಸಂಪಾದಿಸಿದ ಗೌರವವನ್ನು ಕ್ಷಣಾರ್ದದಲ್ಲಿ ಆಬ್ರಾಹಂ ಅವರು ಹರಾಜು ಮಾಡಿದ್ದಾರೆ. ಈ ಸುಳ್ಳು ಆರೋಪಗಳಿಂದ ರಾಜ್ಯದ ರಾಷ್ಟ್ರದ, ಮಾದ್ಯಮ ಹಾಗೂ ಪತ್ರಿಕೆಗಳಲ್ಲಿ ನನ್ನ ಮಾನ ಹರಣವಾಗಿದ್ದು, ಹೀಗಾಗಿ ಸಾಮಾಜಿಕ ಕಾರ್ಯಕರ್ತ ಟಿ.ಜೆ.ಅಬ್ರಾಹಂ ಅವರು 3 ದಿನಗಳ ಒಳಗಾಗಿ ಪತ್ರಿಕಾ ಗೋಷ್ಟಿ ಕರೆದು ಬಹಿರಂಗ ಕ್ಷಮೆ ಯಾಚಿಸುವಂತೆ ಸಚಿವ ಪ್ರಮೋದ್ ಇದೇ ವೇಳೆ ಆಗ್ರಹಿಸಿದರು.
ವಕೀಲ ಎಮ್ ಶಾಂತರಾಮ್ ಅವರ ಮೂಲಕ ಅಬ್ರಾಹಂಗೆ ಅವರಿಗೆ ಲೀಗಲ್ ನೋಟಿಸು ಕಳುಹಿಸಲಾಗಿದ್ದೆ. ಕಾನೂನು ಪ್ರಕಾರ ಅಬ್ರಾಹಂ ಅವರ ಕಾನೂನು ಕ್ರಮ ಕೈಗೊಳ್ಳಲು ಸಿದ್ದತೆ ನಡೆಸಲಾಗಿದೆ ಎಂದರು. ಇದೇ ವೇಳೆ ಬಿಜೆಪಿಗೆ ಹೋಗಲು ಉಡುಪಿಯಲ್ಲಿ ತಡೆ ಇರುವಾಗ ಆ ಪಕ್ಷಕ್ಕೆ ಹೋಗುವ ಪ್ರಶ್ನೆಯೇ ಇಲ್ಲ ಎಂದು ತಮ್ಮ ಮಾತುಗಳನ್ನು ಪುನರುಚ್ಚರಿಸಿದರು.