ಬೆಂಗಳೂರು, ಮಾ 22: ಆದಾಯ ತೆರಿಗೆ ಇಲಾಖೆ ದಾಳಿ ಸಂದರ್ಭದಲ್ಲಿ ಸಾಕ್ಷ್ಯನಾಶ ಪ್ರಕರಣ ಸಂಬಂಧ ಇಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಜಾರಿ ನಿರ್ದೇಶನಾಲಯ ಕೋರ್ಟ್ ಮುಂದೆ ಹಾಜರಾಗುವ ಸಾಧ್ಯತೆ ಇದೆ.
2017ರ ಆಗಸ್ಟ್ 2ರಂದು ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ನಡೆದಿದ್ದ ಐಟಿ ದಾಳಿ ವೇಳೆ ಪವರ್ ಮಿನಿಸ್ಟರ್ ಡಿ.ಕೆ.ಶಿವಕುಮಾರ್ ಮಹತ್ವದ ದಾಖಲೆಗಳಿರುವ ಪೇಪರ್ ಗಳನ್ನು ಹರಿದುಹಾಕುವ ಮೂಲಕ ಸಾಕ್ಷಿ ನಾಶ ಮಾಡಿದ್ದಾರೆಂದು ಆದಾಯ ತೆರಿಗೆ ಇಲಾಖೆ ದೂರು ದಾಖಲಿಸಿತ್ತು. ಈ ಪ್ರಕರಣವನ್ನು ವಿಚಾರಣೆ ನಡೆಸಿದ ಅರ್ಥಿಕ ಅಪರಾಧಗಳ ನ್ಯಾಯಾಲಯ ಮಾರ್ಚ್ 22 ರಂದು ಖುದ್ದು ಹಾಜರಾಗುವಂತೆ ಡಿ.ಕೆ ಶಿವಕುಮಾರ್ ಗೆ ನೋಟಿಸ್ ನೀಡಿತ್ತು.
ಡಿಕೆಶಿ ವಿರುದ್ಧ ಐಪಿಸಿ ಸೆಕ್ಷನ್ 201, 204ರ ಅಡಿ ಸಾಕ್ಷ್ಯನಾಶ ಪ್ರಕರಣ ಹಾಗೂ ಐಟಿ ಕಾಯ್ದೆ 276 ಸಿ1 ಉದ್ದೇಶ ಪೂರ್ವಕ ಆದಾಯ ತೆರಿಗೆ ವಂಚನೆಯ ಅಡಿಯಲ್ಲಿ ಮೂರು ಬೇರೆ ಬೇರೆ ದೂರುಗಳನ್ನು ದಾಖಲಿಸಲಾಗಿದೆ.