ಮಾ, 21 : 'ಲಿಂಗಾಯತ ಮತ್ತು ವೀರಶೈವರನ್ನು ಇಬ್ಬಾಗ ಮಾಡಿ ಹಿಂದೂ ಧರ್ಮದಿಂದ ಪ್ರತ್ಯೇಕಿಸುವ ರಾಜ್ಯ ಸರಕಾರದ ನಿರ್ಧಾರದ ವಿರುದ್ದ ವೀರಶೈವ ಲಿಂಗಾಯಿತ ಮಹಾಸಭಾ ಸಿಡಿದೆದ್ದಿದೆ. ಅಲ್ಲದೆ ಇದು ಅನ್ಯಾಯದ ಪರಮಾವಧಿ'' ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಹೇಳಿದ್ದಾರೆ.
"ಲಿಂಗಾಯತ ಮತ್ತು ವೀರ ಶೈವ ಲಿಂಗಾಯತರನ್ನು ಧಾರ್ಮಿಕ ಅಲ್ಪಸಂಖ್ಯಾಕರೆಂದು ಮಾನ್ಯತೆ ನೀಡಬಹುದು ಎಂದು ರಾಜ್ಯ ಸರಕಾರ ಕೇಂದ್ರಕ್ಕೆ ಶಿಫಾರಸು ಮಾಡಿರುವುದು ಅನ್ಯಾಯ'' ಎಂದು ವ್ಯಾಖ್ಯಾನಿಸಿದ್ದಾರೆ.
ಪ್ರತ್ಯೇಕ ಧರ್ಮ ವಿರೋಧಿಸುತ್ತಿರುವ ಗುರು ವಿರಕ್ತ ಮಾಠಾಧೀಸರು ಹಾಗೂ ಶಾಮನೂರು ಶಿವಶಂಕರಪ್ಪ ಮಂಗಳವಾರ ಗುಪ್ತ ಸಭೆ ನಡೆಸಿದ ಬಳಿಕ ತಳೆದ ನಿಲುವಿನಿಂದಾಗಿ ವಿವಾದ ಮತ್ತಷ್ಟು ಕಾವೇರಿದೆ.ಪ್ರತ್ಯೇಕ ಧರ್ಮ ವಿಷಯಕ್ಕೆ ಸರ್ಕಾರ ತಾರ್ಕಿಕ ಅಂತ್ಯ ಕಾಣಸಬೇಕಾಗಿದೆ ಎಂದು ಭಾವಿಸಿದ್ದರೂ ಮಂಗಳವಾರದ ಬೆಳವಣಿಗೆಯಿಂದಾಗಿ ವಿವಾದ ಮತ್ತೆ ಹೊಗೆಯಾಡಲಾರಂಭಿಸಿದೆ.
ಅಲ್ಲದೆ ರಾಜ್ಯ ಸರಕಾರದ ಶಿಫಾರಸಿನ ಬಗ್ಗೆ ಸಮಾಲೋಚಿಸಲು ಮಾ.23ರಂದು ಮಧ್ಯಾಹ್ನ 2ರಂದು ಬೆಂಗಳೂರಿನಲ್ಲಿ ವೀರಶೈವ ಮಹಾಸಭಾದ ಕಾರ್ಯಕಾರಿಣಿ ಸಭೆ ಕರೆಯಲಾಗಿದೆ.