ಮಾ, 19: ಪಂಜಾಬ್ ನ ಮಾಜಿ ಕಂದಾಯ ಸಚಿವ ಬಿಕ್ರಂ ಸಿಂಗ್ ಮಜೀತಿಯ ಅವರಲ್ಲಿ ಕಳೆದ ವಾರವಷ್ಟೇ ಕ್ಷಮೆಯಾಚಿಸಿ, ಅವರೊಂದಿಗಿನ ಮಾನಹಾನಿ ದಾವೆಯನ್ನು ಕೋರ್ಟಿನಲ್ಲಿ ಇತ್ಯರ್ಥಪಡಿಸಿಕೊಂಡಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಇದೀಗ ನಿತಿನ್ ಗಡ್ಕರಿಯಲ್ಲೂ ಕ್ಷಮೆಯಾಚಿಸಿದ್ದಾರೆ. ಪಟಿಯಾಲ ಹೌಸ್ ಕೋರ್ಟ್ನಲ್ಲಿ ಬಾಕಿ ಇರುವ ಗಡ್ಕರಿ ವಿರುದ್ಧದ ಮಾನಹಾನಿ ದಾವೆಯನ್ನು ವಾಪಾಸ್ಸು ಪಡೆಯುವ ಸಲುವಾಗಿ ಗಡ್ಕರಿ ಜತೆಗಿನ ಜಂಟಿ ಹೇಳಿಕೆಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ.
ಸಚಿವ ನಿತಿನ್ ಗಡ್ಕರಿ ಅವರಿಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಪತ್ರವೊಂದು ಬರೆದಿದ್ದು, ಅದರಲ್ಲಿ ". ಸತ್ಯಾಂಶಗಳನ್ನು ಪರಿಶೀಲಿಸದೆಯೇ ನಾನು ನಿಮ್ಮ ವಿರುದ್ಧ ಮಾಡಿರುವ ಆರೋಪಗಳಿಗೆ ವಿಷಾದ ವ್ಯಕ್ತಪಡಿಸಿ ಕ್ಷಮೆಯಾಚಿಸುತ್ತೇನೆ. ದಯವಿಟ್ಟು ಹಿಂದಿನದನ್ನು ಮರೆತು ಬಿಡಿ' ಹೇಳಿದ್ದಾರೆ . ಹೀಗಾಗಿ ಅವರು ಕ್ಷಮೆ ಹೇಳಿದ ಹಿನ್ನಲೆಯಲ್ಲಿ, ನಿತಿನ್ ಗಡ್ಕರಿ ಅವರು ಅರವಿಂದ ಕೇಜ್ರಿವಾಲ್ ಜತೆಗಿನ ಜಂಟಿ ಹೇಳಿಕೆಗೆ ಸಹಿ ಹಾಕಿ ದಿಲ್ಲಿಯ ಪಟಿಯಾಲ ಕೋರ್ಟ್ ಹೌಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಅಲ್ಲದೆ ಈಗಾಗಲೇ ವಿಚಾರಣೆ ಹಂತದಲ್ಲಿರುವ ಮಾನಹಾನಿ ಕೇಸ್ ನ್ನು ಹಿಂಪಡೆದುಕೊಂಡಿದ್ದಾರೆ.