ಮಾ,19 :ಭಾರತ ದೇಶವನ್ನು 2019ರಲ್ಲಿ ಮೋದಿ ಮುಕ್ತ ಮಾಡಲು ಎಲ್ಲಾ ಪ್ರತಿಪಕ್ಷಗಳು ಒಂದಾಗಿ ಶ್ರಮಿಸಬೇಕಾಗಿದೆ ಎಂದು ಮಹಾರಾಷ್ಟ್ರ ನವನಿರ್ಮಾಣ ಸೇನೆಯ ಮುಖ್ಯಸ್ಥ ರಾಜ್ ಠಾಕ್ರೆ ಎಂದು ಹೇಳಿದ್ದಾರೆ. ಪಕ್ಷದ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು , ಬಿಜೆಪಿ ಸರ್ಕಾರದ ಪೊಳ್ಳು ಭರವಸೆಗಳಿಂದ ದೇಶವಾಸಿಗಳು ರೋಸಿ ಹೋಗಿದ್ದಾರೆ. ಹೀಗಾಗಿ ಮೋದಿ ಮುಕ್ತ ಭಾರತವನ್ನು ಮಾಡಲು ವಿರೋಧ ಪಕ್ಷಗಳು ಒಗ್ಗೂಡಿ ಎನ್ಡಿಎ ಸರ್ಕಾರದ ವಿರುದ್ಧ ನಿಲ್ಲಬೇಕು ಎಂದು ಹೇಳಿದ್ದಾರೆ. ಒಂದು ವೇಳೆ ಭಾರತವು ಮೋದಿ ಮುಕ್ತವಾದರೆ ಅಂದು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಎಂದು ಹೇಳಿದರು.
ಮೋದಿ ಸರ್ಕಾರ ಮಾಡಿದ ನೋಟು ಅಮಾನ್ಯೀಕರಣವನ್ನು ತನಿಖೆಗೆ ಒಳಪಡಿಸಿದ್ದೆ ಆದರೆ , 1947 ರ ನಂತರ ದೇಶದಲ್ಲಿ ನಡೆದ ಬಹುದೊಡ್ಡ ಹಗರಣ ಹೊರಬೀಳಲಿದೆ ಎಂದು ಆಕ್ರೋಶವ್ಯಕ್ತಪಡಿಸಿದರು. ಮೋದಿ ವಿದೇಶಿ ಪ್ರವಾಸಗಳನ್ನು ಕೈಗೊಂಡು ದೇಶಕ್ಕೆ ಬಂಡವಾಳ ತರುವುದನ್ನು ಬಿಟ್ಟು ಪಕೋಡ ಮಾಡುವ ಹಿಟ್ಟು ತರಲೆಂದು ದೇಶ ಸುತ್ತುತ್ತಾರೆ ಎಂದು ವ್ಯಂಗ್ಯವಾಡಿದರು .
ಇದೇ ವೇಳೆ ರಾಮಮಂದಿರದ ಬಗ್ಗೆ ಪ್ರಸ್ತಾಪಿಸಿದ ಅವರು ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕಾಗಿ ನಾನು ಇಚ್ಚಿಸುತ್ತೇನೆ. ಮಂದಿರ ನಿರ್ಮಾಣ ವಿಚಾರ ಮಾತ್ರ ರಾಜಕೀಯವಾಗಿ ಬಳಕೆಯಾಗದಿರಲಿ, ಮತಗಳಿಕೆಗಾಗಿ ಸಮಾಜವನ್ನು ವಿಭಜಿಸದಿರಲಿ ಎಂದು ಆಶಿಸುತ್ತೇನೆ ಎಂದರು.