ಮಾ. 19: ಮಸೀದಿಗಳಲ್ಲಿ ಜಿಹಾದ್ ಬಗೆಗಿನ ಬೋಧನೆ ಮಾಡುವುದನ್ನು ನಿಲ್ಲಿಸಿ, ಅದರ ಬದಲು ಜನರಿಗೆ ಉತ್ತಮ ಮಾರ್ಗ ತೋರಿಸಿ ಎಂದು ಜಮ್ಮು ಮತ್ತು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರು ಮೌಲ್ವಿಗಳಿಗೆ ವಿನಂತಿ ಮಾಡಿಕೊಂಡಿದ್ದಾರೆ. ಸೋಮವಾರ ಶ್ರೀನಗರಲ್ಲಿ ನಡೆದ ಕಾರ್ಯಕ್ರಮದವೊಂದರಲ್ಲಿ ಮಾತನಾಡಿರುವ ಅವರು, ಶಾಂತಿಯ ಧರ್ಮ ಇಸ್ಲಾಂ ಆಗಿದೆ. ಹೀಗಾಗಿ ಇಸ್ಲಾಂ ಧರ್ಮದ ಮೂಲಕ ಮುಸ್ಲಿಂರಿಗೆ ಮಾತ್ರವಲ್ಲದೇ ಇಡೀ ಜಗತ್ತಿಗೆ ಶಾಂತಿಯ ಸೂತ್ರಗಳನ್ನು ಸಾರಬೇಕಾಕಿದೆ ಎಂದರು. ಈ ನಿಟ್ಟಿನಲ್ಲಿ ಮೌಲ್ವಿಗಳು ಕೆಲಸ ಮಾಡಬೇಕಾಗಿದೆ ಎಂದರು.
ಎಲ್ಲ ಧರ್ಮದ ಜನರೂ ಸ್ವರ್ಗಕ್ಕೆ ಹೋಗಲು ಬಯಸುತ್ತಾರೆ .ಅದರೆ ಸ್ವರ್ಗಕ್ಕೆ ಹೋಗಲು ಸುಲಭವಾದ ಮತ್ತು ಹತ್ತಿರದ ದಾರಿಗಳಿಲ್ಲ. ಆದರೆ ಮಾತೃ-ಪಿತೃಗಳ ಪಾದಗಳಲ್ಲಿ ಸ್ವರ್ಗವಿದೆ.ಯುವಕರನ್ನು ಸರಿಹಾದಿಗೆ ಕರೆದೊಯ್ಯಲು ಮೌಲ್ವಿಗಳು ಹಾಗೂ ವಿದ್ವಾಂಸರು ಮುಂದೆ ಬರಬೇಕು ಎಂದು ಕರೆನೀಡಿದ್ದಾರೆ.