ಮಾ, 18 : ಪಿಎನ್ಬಿ ಹಗರಣದ ನೀರವ್ ಮೋದಿ, ಐಪಿಎಲ್ ಹಗರಣದ ಲಲಿತ್ ಮೋದಿ ಹೀಗೆ 'ಮೋದಿ ಎಂಬ ಹೆಸರಿನಲ್ಲೇ ವಂಚನೆ ಅಡಗಿ ಕುಳಿತಿದೆ ಎಂದು ಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾನುವಾರ ವ್ಯಂಗ್ಯವಾಡಿದ್ದಾರೆ. ಮಾಜಿ ಪ್ರಧಾನಿ ಡಾ. ಮನ್ ಮೋಹನ್ ಸಿಂಗ್ ಹಾಗೂ ಕೇಂದ್ರ ಮಾಜಿ ಸಚಿವ ಪಿ. ಚಿದಂಬರಂ ಬಳಿಕ 84 ನೇ ಕಾಂಗ್ರೆಸ್ ಮಹಾ ಅಧಿವೇಶನದಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿ ವಿರುದ್ಧ ಹರಿಹಾಯ್ದರು.
ಪಂಜಾಬ್ ನ್ಯಾಷನಲ್ ಬ್ಯಾಂಕಿನ ಹಗರಣದ ಬಗ್ಗೆ ಮಾತನಾಡುತ್ತಾ ರಾಹುಲ್ ಗಾಂಧಿ, ನೀರವ್ ಮೋದಿ ಭಾರತದ ಶ್ರೀಮಂತ ಉದ್ಯಮಿಗಳು ಹಾಗೂ ಪ್ರಧಾನಿ ನಡುವಿನ ಮಧ್ಯವರ್ತಿಯಾಗಿದ್ದಾರೆ. ಇದು ನಮ್ಮ ಪ್ರಧಾನಿ ಹೆಸರು ಕೂಡಾ ಆಗಿದೆ. ಐಪಿಎಲ್ ಕ್ರಿಕೆಟ್ ನಲ್ಲಿ ಭ್ರಷ್ಟಾಚಾರ ನಡೆಸಿದ ಹೆಸರು ಕೂಡಾ ಮೋದಿ ಆಗಿದೆ. ಹಾಗಾದರೆ ಮೋದಿ ಅಂದರೆ ಅರ್ಥ ಏನು ಇದು ಭಾರತದ ಅತ್ಯಂತ ಶ್ರೀಮಂತ ಉದ್ಯಮಿ ಹಾಗೂ ಪ್ರಧಾನಿ ನಡುವಿನ ಮಧ್ಯವರ್ತಿಯ ಸಂಕೇತವಾಗಿದೆ. ಮೋದಿ ಹೆಸರಿನಲ್ಲಿಯೇ ವಂಚನೆ ಇದೆ ಎಂದು ರಾಹುಲ್ ಗಾಂಧಿ ಆಪಾದಿಸಿದರು.