ಮಾ, 18: ನಿಷೇಧಿಸಿರುವ ನೋಟುಗಳನ್ನು ವಿಲೇವಾರಿ ಮಾಡುವ ಮೊದಲು ಪ್ರಾಮಾಣಿಕವಾಗಿ ಲೆಕ್ಕ ಹಾಕಿ ಬಳಿಕ ಸಂಸ್ಕರಿಸಲಾಗಿದೆ ಎಂದು ಆರ್ಬಿಐ ಹೇಳಿದೆ. ಕೇಂದ್ರ ಸರ್ಕಾರ 2016ರ ನವೆಂಬರ್ 8ರಂದು 500 ಮತ್ತು 1000 ಮುಖಬೆಲೆಯ ನೋಟುಗಳ ಚಲಾವಣೆಯನ್ನು ರದ್ದು ಮಾಡಿದ ಬಳಿಕ ಯಾವ ರೀತಿ ವಿಲೇವಾರಿ ಮಾಡಲಾಗಿದೆ ಎಂಬ ಆರ್ಟಿಐ ಪ್ರಶ್ನೆಗೆ ಆರ್ ಬಿ ಐ ಉತ್ತರಿಸಿ ಈ ಮಾಹಿತಿ ನೀಡಿದೆ. "ನೋಟು ಪರಿಶೀಲನೆ ಹಾಗೂ ಸಂಸ್ಕರಣೆಯ ಅತ್ಯಾಧುನಿಕ ವಿಧಾನಗಳ ಮೂಲಕ ರದ್ದಾದ ನೋಟುಗಳನ್ನು ಎಣಿಸಲಾಗಿದೆ. ಆರ್ಬಿಐನ ಹಲವು ಶಾಖೆಗಳಲ್ಲಿ ಅಳವಡಿಸಲಾಗಿರುವ ನೋಟು ಚೂರುಮಾಡುವ ಹಾಗೂ ಕರಗಿಸುವ ವ್ಯವಸ್ಥೆ ಮೂಲಕವೇ ನೋಟು ವಿಲೇವಾರಿ ಮಾಡಲಾಗಿದೆ. ಅಲ್ಲದೆ ಸಂಸ್ಕರಿಸಿದ ನೋಟುಗಳನ್ನು ಮರುಬಳಕೆ ಮಾಡುವುದಿಲ್ಲ" ಎಂದು ತಿಳಿಸಿದೆ. ಇನ್ನು ರದ್ದಾದ ನೋಟುಗಳ ಪರಿಶೀಲನೆ ಹಾಗೂ ಸಂಸ್ಕರಣೆಗಾಗಿಯೇ ಆರ್ಬಿಐ ವಿವಿಧ ಶಾಖೆಗಳಲ್ಲಿ ಅಳವಡಿಸಿರುವ ಕನಿಷ್ಟ 59 ಅತ್ಯಾಧುನಿಕ ಯಂತ್ರಗಳು ಕಾರ್ಯನಿರ್ವಹಿಸಿದೆಯಂತೆ.