ಸುಳ್ಯ, ಮಾ 18: ಸಿ.ಆರ್.ಎಫ್ ಯೋಜನೆಯಲ್ಲಿ ರಸ್ತೆ ಅಭಿವೃದ್ದಿಗಾಗಿ ಕೇಂದ್ರ ಸರಕಾರ ರಾಜ್ಯಕ್ಕೆ ಬಿಡುಗಡೆ ಮಾಡಿದ್ದು ಕೇವಲ 500ಕೋಟಿ ರೂ. ಮಾತ್ರ ಇದರಿಂದ ರಸ್ತೆ ಅಭಿವೃದ್ದಿಗೆ ಸಮಸ್ಯೆಯಾಗಿದೆ.ಆದರೆ ಬಿ.ಜೆ.ಪಿಯವರು ಕಾಂಗ್ರೆಸ್ ಅನುದಾನ ಬಿಡುಗಡೆ ಮಾಡುತ್ತಿಲ್ಲ ಎಂದು ಹೇಳಿಕೆ ನೀಡುತ್ತಿರುವುದು ಸರಿಯಲ್ಲ. ಎಂದು ದ.ಕ ಜಿಲ್ಲಾ ಉಸ್ತುವಾರಿ ಮಂತ್ರಿ ಬಿ.ರಮಾನಾಥ ರೈ ಹೇಳಿದರು.ಅವರು ಸುಳ್ಯದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು.
ನಾವು ತೆರಿಗೆ ಕಟ್ಟಿದ ಹಣವನ್ನೆ ಅಭಿವೃದ್ದಿ ಕೆಲಸಗಳಿಗೆ ಉಪಯೋಗ ಮಾಡಲಾಗುತ್ತಿದೆ ಹೊರತು ಯಾರ ಸ್ವಂತ ಹಣ ಅಲ್ಲ ಎಂದು ಪರ್ತಕರ್ತರ ಪ್ರಶ್ನೆಗೆ ಉತ್ತರಿಸಿದರು.