ಮಂಗಳೂರುಸೆ19:ದಕ್ಷಿಣ ಕನ್ನಡ ಜಿಲ್ಲೆಯ ವ್ಯಾಪ್ತಿಗೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ವಿ ಜೆ ಸಜೀತ್ ಮತ್ತು ಮಂಗಳೂರು ನಗರ ಪೋಲಿಸ್ ಕಮೀಷನರೇಟ್ ವ್ಯಾಪ್ತಿಯ ಅಪರಾಧ ಮತ್ತು ಸಂಚಾರ ವಿಭಾಗಕ್ಕೆ ಸಹಾಯಕ ಕಮೀಷನರ್ ಆಗಿ ಉಮಾ ಪ್ರಶಾಂತ್ ನಿಯುಕ್ತಿಗೊಳಿಸಿ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಜಿಲ್ಲೆಯ ಹೆಚ್ಚುವರಿಯಾಗಿ ಎಸ್ಪಿಯಾಗಿದ್ದ ವಿಷ್ಟುವರ್ಧನ್ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ವಿ ಜೆ ಸತೀಶ್ ಅಧಿಕಾರವಹಿಸಿದ್ದು, ಇವರು ಸದ್ಯ ಬೆಂಗಳೂರಿನ ಎಐಜಿಪಿ ಪ್ರಧಾನ ಕಚೇರಿಯಲ್ಲಿ ಎಸ್ಪಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಕಮೀಷನರ್ ಆಗಿ ಉಮಾಪ್ರಶಾಂತ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ.