ಮಂಗಳೂರುಸೆ19 : ಕದ್ದ ಚಿನ್ನ ವಾಪಸ್ ಬರಲು ಸಾಧ್ಯವೇ? ಖಂಡಿತಾ ಇಲ್ಲ ಅಲ್ವಾ. ಅದ್ರೆ ಇಲ್ಲೊಂದು ವಿಭಿನ್ನ ಘಟನೆ ನಡೆದಿದೆ. ಅದು ಸ್ಸಾರಿ ಕೇಳಿ ಕದ್ದ ಚಿನ್ನ ಮರಳಿಸಿಕೊಟ್ಟಿದ್ದು. ಹೌದು ಈ ಘಟನೆ ನಡೆದಿದ್ದು ಬೇರೆಲ್ಲೂ ಅಲ್ಲ, ಮಂಗಳೂರಿನಲ್ಲಿ. ಅದು ಕದ್ದ ಚಿನ್ನ ಬರೋಬ್ಬರಿ 99 ಪವನ್. ಮನೆಯಿಂದ ಕದ್ದ ಚಿನ್ನಾಭರಣಗಳನ್ನು ಮೂರೇ ದಿನಗಳಲ್ಲಿ ಕಳ್ಳರು ವಾಪಸ್ ಅದೇ ಮನೆಯ ಅಂಗಳಕ್ಕೆ ಎಸೆದು ಮನೆ ಹೋಗಿದ್ದಾರೆ. ಇನ್ನು ಅದರೊಳಗಿದ್ದ ಕ್ಷಮಾಪಣೆ ಪತ್ರದಲ್ಲಿ ನಮ್ಮದು ತಪ್ಪಾಯಿತು. ಕ್ಷಮಿಸಿ. ಇಷ್ಟೊಂದು ಚಿನ್ನವನ್ನು ಬ್ಯಾಂಕಿನಲ್ಲಿ ಇಡಬೇಕಿತ್ತು. ಮನೆಯಲ್ಲಿ ಯಾಕಿಟ್ಟಿರಿ? ಇನ್ನಾದರೂ ಜಾಗ್ರತೆ ವಹಿಸಿ' ಎಂದು ಚೀಟಿಯಲ್ಲಿ ಬರೆಯಲಾಗಿದೆ. ಚಿನ್ನವನ್ನು ಯಾಕೆ ಕದ್ದಿದ್ದು, ವಾಪಾಸ್ ಯಾಕೆ ತಂದರು ಅನ್ನೋದು ಪೋಲಿಸ್ ಇಲಾಖೆ ಜತೆಗೆ ಎಲ್ಲರಿಗೂ ಆಶ್ಚರ್ಯ ತಂದಿದೆ.
ಫಟನೆ ಹಿನ್ನಲೆ:
ನಗರದ ಅಡುಮರೋಳಿಯ ಮಾರಿಕಾಂಬಾ ದೇವಸ್ಥಾನದ ಬಳಿಯ ಶೇಖರ್ ಕುಂದರ್ ಅವರ ಮನೆಯಿಂದ ಶನಿವಾರ ಹಾಡಹಗಲೇ 99 ಪವನು ತೂಕದ ವಿವಿಧ ಚಿನ್ನಾಭರಣಗಳು ಮತ್ತು 13,000 ರೂ. ನಗದು ಕಳವಾಗಿತ್ತು.ಮನೆಯಿಂದ ಕಚೇರಿಗೆ ತೆರಳಿದ್ದ ಸಂದರ್ಭದಲ್ಲಿ ಬೆಳಗ್ಗೆ 9.50ರಿಂದ ಮಧ್ಯಾಹ್ನ 1.20ರ ವೇಳೆಗೆ ಕಳವು ನಡೆದಿತ್ತು. ಮಧ್ಯಾಹ್ನ 1.20ರ ಹೊತ್ತಿಗೆ ಶೇಖರ್ ಅವರು ಮನೆಗೆ ಊಟಕ್ಕೆ ಬಂದು ಬಾಗಿಲು ತೆಗೆದು ಒಳಪ್ರವೇಶಿಸಿದಾಗ ರೂಮಿನಲ್ಲಿ ಎಲ್ಲ ಬಟ್ಟೆಬರೆಗಳು ಚೆಲ್ಲಾಪಿಲ್ಲಿಯಾಗಿದ್ದವು.ಸೋಮವಾರ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಷ್ಟೂ ಚಿನ್ನ ಮತ್ತು ನಗದನ್ನು ಚೀಟಿ ಯೊಂದಿಗೆ ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಮನೆ ಮಾಲಕರ ಸಂಬಂಧಿಕರು ಇದ್ದರು. ಮನೆಯಲ್ಲಿದ್ದವರು ಅಂಗಳಕ್ಕೆ ಹೋಗಿ ಕಟ್ಟು ಬಿಚ್ಚಿ ನೋಡಿದಾಗ ಅವರಿಗೆ ಆಶ್ಚರ್ಯ ಕಾದಿತ್ತು. ಶನಿವಾರ ಮನೆಯಿಂದ ಕಳವಾಗಿದ್ದ ಪೂರ್ತಿ ಚಿನ್ನಾಭರಣ ಅದರಲ್ಲಿದ್ದವು.