ಉಡುಪಿ, ಮಾ 14 : ರಾಷ್ಟ್ರೀಯ ಬ್ಯಾಂಕಿಗೆ ಸಚಿವ ಪ್ರಮೋದ್ ಮದ್ವರಾಜ್ 193 ಕೋಟಿ ರೂಪಾಯಿ ಪಂಗನಾಮ ಹಾಕಿದ್ದಾರೆ ಎನ್ನುವ ಆರೋಪಕ್ಕೆ, ಪ್ರಮೋದ್ ಮದ್ವರಾಜ್ ಅವರು ಉಡುಪಿಯಲ್ಲಿ ಮಾ 14 ರ ಬುಧವಾರ ಪ್ರತಿಕ್ರಿಯಿಸಿ ಮಾತನಾಡಿ ಕೇಂದ್ರ ಹಣಕಾಸು ಸಚಿವಾಲಯ ಆರೋಪದಲ್ಲಿ ಎಳಷ್ಟು ಹುರುಳಿಲ್ಲ. ಮಾದ್ಯಮಗಳು ಬಿತ್ತರಿಸುತ್ತಿರುವ ಸುದ್ದಿ ಶುದ್ದ ಸುಳ್ಳು. ನಾನು ಯಾವ ಬ್ಯಾಂಕಿಗೂ ಪಂಗನಾಮ ಹಾಕಿಲ್ಲ. ಬ್ಯಾಂಕಿನಲ್ಲಿ ಪಡೆದಿರುವ ಸಾಲಕ್ಕೆ ಸಮಾನವಾಗಿ ನನ್ನ ಆಸ್ತಿಯ ಪತ್ರಗಳನ್ನು ಶ್ಯೂರಿಟಿ ಇಟ್ಟಿದ್ದೇನೆ. ಇದರ ಹೊರತಾಗಿಯೂ ಅನುಮಾನ ಇದ್ರೆ ಮಲ್ಪೆ ಬ್ಯಾಂಕಿನಲ್ಲಿ ನನ್ನ ಅಕೌಂಟ್ ಇದೆ. ಯಾರು ಬೇಕಾದ್ರು ಈ ಬಗ್ಗೆ ವಿಚಾರಣೆ ನಡೆಸಬಹುದು ಎಂದರು. ಇನ್ನೂ ರಾಷ್ಟ್ರೀಯ ಬ್ಯಾಂಕುಗಳು ಕೇಂದ್ರ ಸರ್ಕಾರದ ಅಧೀನದಲ್ಲಿದೆ. ಕೇಂದ್ರ ಸರಕಾರ ಈ ಬಗ್ಗೆ ತನಿಖೆ ನಡೆಸುವುದಾದ್ರೆ ನನ್ನ ಅಭ್ಯಂತರ ಎನೂ ಇಲ್ಲ. ನಾನು ತನಿಖೆಗೂ ಸಿದ್ದ. ಸುಳ್ಳು ಸುದ್ದಿಗಳ ಬಗ್ಗೆ ಜನ ನಂಬುವುದಾದ್ರೆ ನಾನು ಎನು ಮಾಡಲು ಸಾದ್ಯವಿಲ್ಲ ಎಂದರು.
ಇನ್ನೊಂದೆಡೆ ಸಾಮಾಜಿಕ ಜಾಲ ತಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ಭ್ರಷ್ಟಚಾರಿ ಎಂದು, ಸಭಾಪತಿ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡುತ್ತಿರುವ ಕಿಡಿಗೇಡಿಗಳ ವಿರುದ್ದ ಮಾಜಿ ಶಾಸಕ ಯು ಆರ್ ಸಭಾಪತಿ ಆವರು ಉಡುಪಿ ಠಾಣೆಯ ಸೈಬರ್ ವಿಭಾಗದಲ್ಲಿ ದೂರು ಸಲ್ಲಿಸಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್ ಮದ್ವರಾಜ್ ವಿರುದ್ದ ಮಾಜಿ ಶಾಸಕ ಯುರ್ ಸಭಾಪತಿ ಹೆಸರಿನಲ್ಲಿ ವಾಟ್ಸ್ಯಪ್ನಲ್ಲಿ ಬರಹವೊಂದು ಪೋಸ್ಟ್ ಆಗುತ್ತಿದೆ. ಇದು ವಿರೋಧ ಪಕ್ಷಗಳ ಚುನಾವಣಾ ಗಿಮಿಕ್. ವಿರೋಧ ಪಕ್ಷಗಳಿಗೆ ಪ್ರಮೋದ್ ಅವರ ಎಳಿಗೆಯನ್ನು ಸಹಿಸಲಾಗುತ್ತಿಲ್ಲ. ಅಪಾರವಾದ ಜನ ಬೆಂಬಲವನ್ನು ಹೊಂದಿರುವ ಪ್ರಮೋದ್ ಅವರು ಈ ಬಾರಿಯೂ ಗೆಲುವು ಸಾಧಿಸುತ್ತಾರೆ ಎಂದು ವಿರೋದ ಪಕ್ಷಗಳು ಹೆದರಿ ಈ ರೀತಿ ಬರಹಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಈ ಸುದ್ದಿಯಲ್ಲಿ ಯಾವುದೇ ಸತ್ಯಾಂಶವಿಲ್ಲ ಇಂತವರಿಗೆ ಜನರೇ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ. ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿ ಹರಡಿದವರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸರನ್ನು ಒತ್ತಾಯಿಸಲಾಗಿದೆ ಎಂದು ಹೇಳಿದ್ದಾರೆ.