ಮಂಗಳೂರು, ಮಾ.14: ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸಲುವಾಗಿ ಆಗಮಿಸಿದ್ದ ಬಹುಭಾಷಾ ನಟ, ಪ್ರಕಾಶ್ ರಾಜ್ ಇಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದ ನಡೆಸಿದರು. ಬಳಿಕ ಅಮಿತ್ ಶಾ ವಿರುದ್ಧ ವಿದ್ಯಾರ್ಥಿ ಕಮೆಂಟ್ ಮಾಡಿದ ವಿಚಾರಕ್ಕೆ ಸಂಬಂಧಪಟ್ಟಂತೆ ಮಾತನಾಡಿದ ಅವರು , ಅಭಿಪ್ರಾಯ ವ್ಯಕ್ತಪಡಿಸಲು ವಿದ್ಯಾರ್ಥಿಗೆ ಸೇರಿದಂತೆ ಎಲ್ಲರಿಗೂ ಈ ದೇಶದಲ್ಲಿ ಹಕ್ಕಿದೆ. ಷಾ ವಿರುದ್ಧ ಮಾತನಾಡಿದ್ದ ವಿದ್ಯಾರ್ಥಿ ವಿರುದ್ಧ ಯಾರೆಲ್ಲಾ ಪಿತೂರಿ ನಡೆಸಿದ್ದಾರೆ, ಯಾರೆಲ್ಲಾ ತಂತ್ರಗಾರಿಕೆ ಹೆಣೆದಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿ ನನ್ನಲ್ಲಿದೆ. ಅದಕ್ಕೂ ಮೊದಲು ಷಾ ವಿರುದ್ಧ ಮಾತನಾಡಿದ್ದ ವಿದ್ಯಾರ್ಥಿಗೆ ಸುರಕ್ಷತೆ ನೀಡಿ ಬಳಿಕ ಮಾತನಾಡುತ್ತೇನೆ ಎಂದು ಪ್ರಕಾಶ್ ರಾಜ್ ಹೇಳಿದರು.
ಇನ್ನು ಮಂಗಳೂರಿನಲ್ಲಿ ನಡೆದ ಪಬ್ ದಾಳಿ ಪ್ರಕರಣದ ತೀರ್ಪಿಗೆ ಸಂಬಂಧ ಪಟ್ಟಂತೆ ಮಾತನಾಡಿದ ಅವರು, ಪಬ್ ದಾಳಿ ಪ್ರಕರಣದಲ್ಲಿ ಆರೋಪಿಗಳು ಖುಲಾಸೆ ಆಗುವಲ್ಲಿ ಕಾಂಗ್ರೆಸ್ ಪಕ್ಷದ್ದೂ ತಪ್ಪು ಇದೆ ಎಂದರು.
ಬಳಿಕ ಕರ್ನಾಟಕ ದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ನಾನು ಯಾವ ಪಕ್ಷವನ್ನೂ ಬೆಂಬಲಿಸುವುದಿಲ್ಲ. ಆದರೆ, ಬಿಜಪಿ ಪಕ್ಷದ ಕೋಮುವಾದಿ ರಾಜಕೀಯವನ್ನು ವಿರೋಧಿಸಲಿದ್ದೇನೆ ಎಂದರು.
ಎಲ್ಲಾ ರಾಜಕೀಯ ಪಕ್ಷಗಳು, ತಮ್ಮ ಪಕ್ಷದ ಚಿಹ್ನೆಗಿಂತ ಅಭ್ಯರ್ಥಿಗಳ ಮುಖಕ್ಕೆ ಪ್ರಮುಖ್ಯತೆ ನೀಡಬೇಕು ಎಂದು ಹೇಳಿದರು.
ಇದೇ ವೇಳೆ ನಾನು ಚುನಾವಣಾ ರಾಜಕೀಯ ಪ್ರವೇಶಿಸುವುದಿಲ್ಲ ಆದ್ರೆ ಪ್ರಶ್ನಿಸುವ ರಾಜಕೀಯದಲ್ಲಿ ಮಾತ್ರ ಇರುತ್ತೇನೆ. ಕರ್ನಾಟಕದ ಉದ್ದಗಲಕ್ಕೆ ‘Just asking’ ಅಭಿಯಾನ ಕಟ್ಟುತ್ತೇನೆ’ ಎಂದು ಪ್ರಕಾಶ್ ರೈ ಹೇಳಿದರು
ಇದೇ ಸಂದರ್ಭ ಅವರು ಕಾರ್ಯಕ್ರಮಕ್ಕಾಗಿ ನಗರಕ್ಕೆ ಆಗಮಿಸುವ ಸಂದರ್ಭ, ಅವರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆದರಿಕೆ ಹಾಕಿದ ಘಟನೆಯನ್ನು ಅವರು ವಿವರಿಸಿದರು. ತನ್ನ ಕಾರು ಚಾಲಕ ಬಳಿ ನಾಲ್ವರು ಅಪರಿಚಿತರು ಬಂದು ಪ್ರಶ್ನಿಸಿದ್ದಾರೆ. ನಾನು ಎಲ್ಲಿ ಉಳಿದುಕೊಳ್ಳುತ್ತೇನೆ ಎಂದು ಕೇಳಿರುವುದಲ್ಲದೆ ಕಾರು ಚಾಲಕನಿಗೆ ಬೆದರಿಸಿ ಧಮ್ಕಿ ಕೂಡಾ ಹಾಕಿದ್ದಾರೆ. ಈ ಸಂದರ್ಭ ಅಲ್ಲಿಗೆ ಪೊಲೀಸರು ಬಂದ ಕಾರಣ ಅಪರಿಚಿತರು ಸ್ಥಳದಿಂದ ತೆರಳಿದ್ದಾರೆ. ಎಂದು ಪ್ರಕಾಶ್ ರೈ ಅಸಮಾಧಾನ ವ್ಯಕ್ತಪಡಿಸಿದರು.