ಮೂಡುಬಿದಿರೆ, ಮಾ 14: ಕರಿಂಜೆ ಶ್ರೀ ಮುಕ್ತಾನಂದ ಸ್ವಾಮೀಜಿಗಳನ್ನು ಏಕವಚನದಲ್ಲಿ ನಿಂದಿಸಿ, ಅವರ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿರುವ ಮೂಡುಬಿದಿರೆ ಶಾಸಕ ಕೆ.ಅಭಯಚಂದ್ರ ಜೈನ್ ಸಾರ್ವಜನಿಕವಾಗಿ ಸ್ವಾಮೀಜಿಗಳ ಕ್ಷಮೆ ಕೇಳಬೇಕು ಎಂದು ಮೂಡುಬಿದಿರೆ ಮಂಡಲ ಬಿಜೆಪಿ ಒತ್ತಾಯಿಸಿದೆ.
ಕರಿಂಜೆ ಶ್ರೀ ಅವರ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕರೆಯಲಾಗಿದ್ದ ಸುದ್ಧಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿ ಮಂಡಲ ಅಧ್ಯಕ್ಷ ಈಶ್ವರ ಕಟೀಲ್, ಅಭಯಚಂದ್ರ ಜೈನ್ ಹಿಂದೂ ವಿರೋಧಿ ಧೋರಣೆ ಸರ್ಕಾರದ ಧೋರಣೆಗಳನ್ನು ಪ್ರತಿಪಾಧಿಸುತ್ತದೆ. ಹಿಂದುಗಳ ಧಾರ್ಮಿಕ ಕೇಂದ್ರಗಳ ಮೇಲೆ, ಹಿಂದೂ ಸ್ವಾಮೀಜಿಗಳು, ನಾಯಕರಗಳನ್ನು ಗುರಿಯಾಗಿಸಿ ನಡೆಸುತ್ತಿರುವ ದಾಳಿಯ ಮುಂದುವರಿದ ಭಾಗವೇ ಕರಿಂಜೆ ಶ್ರೀ ಅವರ ನಿಂದನೆ. ಕಾಂಗ್ರೆಸ್ ಸರ್ಕಾರದ ಈ ಧೋರಣೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಅಭಯಚಂದ್ರ ಜೈನ್ ವೋಟ್ಗೆ ನಿಲ್ಲಲು ಸ್ವಾಮೀಜಿಗೆ ಸವಾಲು ಹಾಕುವುದಲ್ಲ, ಅಭಯಚಂದ್ರ ಜೈನ್ ಅವರೇ ನಿಮಗೆ ತಾಕತ್ತಿದ್ದರೆ ಮುಂದಿನ ಚುನಾವಣೆಯಲ್ಲಿ ನಿಂತು ಹಿಂದೂ ಅಭ್ಯರ್ಥಿಯನ್ನು ಎದುರಿಸಿ ಎಂದು ಸವಾಲೆಸದರು.
ಕರಿಂಜೆ ಶ್ರೀ ಪ್ರಕರಣಕ್ಕೆ ಸಂಬಂಧಿಸಿದಂತೆ ಅಭಯಚಂದ್ರ ಜೈನ್ ವಿರುದ್ಧ ಹಿಂದೂ ಸಂಘಟನೆಗಳು ನಡೆಸಲು ಹೊರಟಿರುವ ಪ್ರತಿಭಟನೆಗೆ ಬಿಜೆಪಿ ಪಕ್ಷ ಸಂಪೂರ್ಣ ಬೆಂಬಲ ಸೂಚಿಸುತ್ತದೆ. ಬಿಜೆಪಿ ಪಕ್ಷ ಕರಿಂಜೆ ಶ್ರೀಗಳೊಂದಿಗೆ ಸದಾ ಇರುತ್ತದೆ. ಕಾಂಗ್ರೆಸ್ ನಡೆಸುತ್ತಿರುವ ಗೂಂಡಾ, ಬ್ಲಾಕ್ಮೈಲ್ ಹಾಗೂ ಗೂಂಡಾ ರಾಜಕಾರಣಕ್ಕೆ ತಕ್ಕ ಪಾಠ ಕಲಿಸುತ್ತದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಸುದರ್ಶನ ಎಂ., ಉಮಾನಾಥ ಕೋಟ್ಯಾನ್, ಬಿಜೆಪಿ ಮಂಡಲ ಪ್ರಧಾನಕ ಕಾರ್ಯದರ್ಶಿ ಸುಕೇಶ್ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.